ಗಂಗಾವತಿ ತಾಲ್ಲೂಕಿನ ವಿರುಪಾಪುರಗಡ್ಡೆಯಿಂದ ವಿದೇಶಿಗರನ್ನು ಹೊರಕ್ಕೆ ಕಳಿಸಲಾಯಿತು.
ಗಂಗಾವತಿ ತಾಲ್ಲೂಕಿನ ವಿರುಪಾಪುರಗಡ್ಡೆಯಿಂದ ವಿದೇಶಿಗರನ್ನು ಹೊರಕ್ಕೆ ಕಳಿಸಲಾಯಿತು.

ಗಂಗಾವತಿ: ನದಿಗೆ ಅಪಾರ ನೀರು, ಆನೆಗೊಂದಿ ಸುತ್ತಲೂ ಹೈ ಅಲರ್ಟ್!

ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವ ಪರಿಣಾಮ ನದಿಪಾತ್ರದಲ್ಲಿರುವ ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. 

ಗಂಗಾವತಿ: ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವ ಪರಿಣಾಮ ನದಿಪಾತ್ರದಲ್ಲಿರುವ ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. 

ಈಗಾಗಲೆ ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವಾದ ವಿರುಪಾಪುರಗಡ್ಡೆಯ ಸುತ್ತಲೂ ಜಲಾವೃತವಾಗಿದ್ದು ನಡುಗಡೆಯಾಗಿದೆ. ಪ್ರವಾಸಿ ಧಾರ್ಮಿಕ ಕ್ಷೇತ್ರಗಳಾದ ಖಷಿಮುಖ ಪರ್ವತ, ನವವೃಂದಾವನ ಗಡ್ಡೆಗೆ ಸಂಪರ್ಕ ಕಡೆದುಕೊಂಡಿದೆ. 

ಕೃಷ್ಣದೇವರಾಯನ ಸಮಾಧಿ ಸಂಪೂರ್ಣ ಜಲಾವೃತವಾಗಿದೆ. ಆನೆಗೊಂದಿ ಭಾಗದಲ್ಲಿ ರೆಡ್ ಅಲಾರ್ಟ್ ಘೋಷಣೆಯಾಗಿದ್ದು, ಗ್ರಾಮಸ್ಥರಿಗೆ ಕಂದಾಯ ಇಲಾಖೆ ಹಾಗೂ ಪಂಚಾಯಿತಿಯಿಂದ ಡಂಗೂರ ಹಾಕಿಸಿ ಎಚ್ಚರಿಕೆ ನೀಡಲಾಗುತ್ತಿದೆ. 

ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು, ಸ್ನಾನ ಅಥವಾ ಕೃಷಿ ಚಟುವಟಿಕೆ ಕೈಗೊಳ್ಳಲು ನದಿಪಾತ್ರಕ್ಕೆ ಹೋಗದಂತೆ ಜನರಿಗೆ ಗ್ರಾಮ ಪಂಚಾಯಿತಿಯಿಂದ ಎಚ್ಚರಿಕೆ ರವಾನಿಸಲಾಗಿದೆ. ಈಗಾಗಲೆ ಆನೆಗೊಂದಿ, ಚಿಕ್ಕ ಜಂತಕಲ್, ಸಿಂಗನಗುಂಡು, ವಿಪ್ರ, ಭಾಗದಲ್ಲಿನ ಬಾಳೆಗಿಡಗಳು ನೀರಿನಲ್ಲಿ ಮುಳುಗಿವೆ. ಅಯೋಧ್ಯೆ, ಢಣಾಪುರ, ಮುಷ್ಟೂರು, ಡಗ್ಗಿ, ಬರಗೂರು, ಕುಂಟೋಜಿ, ಕಕ್ಕರಗೋಳ ಮೊದಲಾದ ಗ್ರಾಮಗಳಲ್ಲಿ ಈಗಾಗಲೆ ಪ್ರವಾಹದ ಭೀತಿ ಎದುರಾಗಿದೆ. 

ಈಗಾಗಲೆ ನದಿಗೆ 90 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಕಂಪ್ಲಿಯ ಸೇತುವೆ ಮುಳುಗಡೆಗೆ ಕೇವಲ ನಾಲ್ಕು ಅಡಿ ಮಾತ್ರ ಬಾಕಿಯಿದೆ. ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹರಿಸಿದಲ್ಲಿ ಸೇತುವೆ ಮುಳುಗಡೆಯಾಗಲಿದೆ. ಇದರಿಂದ ಗಂಗಾವತಿ ಮತ್ತು ಕಂಪ್ಲಿ ಮಧ್ಯೆದ ನೇರ ರಸ್ತೆ ಸಂಪರ್ಕ ಸ್ಥಗಿತವಾಗಲಿದೆ. ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಸಂಪರ್ಕಕ್ಕೆ ಸುತ್ತುಬಳಿಸಿ ಹೊಸಪೇಟೆ ಇಲ್ಲವೇ ಸಿರುಗುಪ್ಪಾದ ಮೂಲಕ ರಸ್ತೆ ಸಂಪರ್ಕ ಸಾಧಿಸುವ ಅನಿವಾರ್ಯತೆ ಎದುರಾಗಲಿದೆ. 

ಈಗಾಗಲೆ ಕಳೆದ ಎರೆಡು ತಿಂಗಳಲ್ಲಿ ಮೂರು ಬಾರಿ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಈಗಾಗಲೆ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಮೇಲಿನ ಸಂಚಾರ ಅಪಾಯಕಾರಿಯಾಗಿದ್ದು, ಭಾರಿ ವಾಹನಗಳು ಸಂಚರಿಸಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳಿವೆ.

Related Stories

No stories found.

Advertisement

X
Kannada Prabha
www.kannadaprabha.com