ಅನರ್ಹ ಶಾಸಕರ ಅರ್ಜಿ ಇಂದು ಸುಪ್ರೀಂ ಕೋರ್ಟ್'ನಲ್ಲಿ ವಿಚಾರಣೆ

ವಿಧಾನಸಭೆಯ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ತಮ್ಮನ್ನು 15ನೇ ವಿಧಾನಸಭೆ ಉಳಿದ ಅವಧಿಗೆ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಅನರ್ಹ ಶಾಸಕರು ಸುಪ್ರೀಂಕೋರ್ಟ್'ನಲ್ಲಿ ಸಲ್ಲಿಸಿರುವ ಅರ್ಜಿಯ ಮಹತ್ವದ ವಿಚಾರಣೆ ಈ ಹಿಂದೆ ನಿಗದಪಡಿಸಿದಂತೆಯೇ ಮಂಗಳವಾರವೇ ನಡೆಯಲಿದೆ. 

Published: 22nd October 2019 07:32 AM  |   Last Updated: 22nd October 2019 11:54 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ವಿಧಾನಸಭೆಯ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ತಮ್ಮನ್ನು 15ನೇ ವಿಧಾನಸಭೆ ಉಳಿದ ಅವಧಿಗೆ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಅನರ್ಹ ಶಾಸಕರು ಸುಪ್ರೀಂಕೋರ್ಟ್'ನಲ್ಲಿ ಸಲ್ಲಿಸಿರುವ ಅರ್ಜಿಯ ಮಹತ್ವದ ವಿಚಾರಣೆ ಈ ಹಿಂದೆ ನಿಗದಪಡಿಸಿದಂತೆಯೇ ಮಂಗಳವಾರವೇ ನಡೆಯಲಿದೆ. 

ಇದಕ್ಕೂ ಮೊದಲು ನ್ಯಾಯಾಲಯವು ಜೆಡಿಎಸ್, ಕಾಂಗ್ರೆಸ್ ಮತ್ತು ಸ್ಪೀಕರ್ ಪರ ವಕೀಲರ ಆಗ್ರಹ ಆಲಿಸಿ ಒಂದು ದಿನದಮಟ್ಟಿಗೆ ವಿಚಾರಣೆಯನ್ನು ಮುಂದೂಡಲು ನಿರ್ಧರಿಸಿತ್ತು. 

ನಂತರ ಚುನಾವಣಾ ಆಯೋಗದ ಮನವಿ ಮೇರೆಗೆ ಪೂರ್ವ ನಿಗದಿಯಂತೆ ವಿಚಾರಣೆ ಮುಂದುವರೆಸುವ ತೀರ್ಮಾನ ಪ್ರಕಟಿಸಿತು. ಪ್ರಕರಣ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಅಂದರೆ ಸೆ.26ರಂದು ಸುಪ್ರೀಂಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.22ಕ್ಕೆ ನಿಗದಿಪಡಿಸಿತ್ತು. ಕಳೆದ ಶನಿವಾರ ಪ್ರಕಟಗೊಂಡ ಮಂಗಳವಾರದ ಸುಪ್ರೀಂಕೋರ್ಟಿನ ಕಲಾಪಗಳ ಪಟ್ಟಿಯಲ್ಲೂ ಪ್ರಕರಣ ನಮೂದಾಗಿತ್ತು. ಆದರೆ, ಸೋಮವಾರ ಕಾಂಗ್ರೆಸ್, ಜೆಡಿಎಸ್ ಮತ್ತು ರಮೇಶ್ ಕುಮಾರ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ನಾವು ಇನ್ನೂ ನಮ್ಮ ಆಕ್ಷೇಪವನ್ನು ಲಿಖಿತ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ನಮಗೆ ಪ್ರತಿ ಅಫಿಡವಿಟ್ ಸಲ್ಲಿಸಲು ಒಂದಷ್ಟು ಕಾಲಾವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಕೆಲ ದಿನಗಳ ಮಟ್ಟಿದೆ ಮುಂದೂಡುವಂತೆ ಮೌಖಿಕವಾಗಿ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡದು. 

ದ್ವಿಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆ ಮುಂದೂಡಲು ನಿರಾಕರಿಸಿತಲ್ಲದೆ, ಅನರ್ಹ ಶಾಸಕರ ಪರ ವಕೀಲರು ಕೂಡ ವಿಚಾರಣೆ ಮುಂದೂಡಲು ವಿರೋಧ ವ್ಯಕ್ತಪಡಿಸಿದರು. ಆದರೆ, ಒಂದು ದಿನದ ಮಟ್ಟಿದೆ ಅಂದರೆ ಅ.23ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿ ಮಧ್ಯಾಹ್ನ 2ಗಂಟೆಗೆ ವಿಚಾರಣೆಯನ್ನು ನಿಗದಿ ಮಾಡಿತ್ತು. ಆದರೆ, ಮಧ್ಯಾಹ್ನ 12ಗಂಟೆ ಹೊತ್ತಿಗೆ ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ನ್ಯಾಯಾಲಯದ ಮುಂದೆ ಹಾಜರಾಗಿ, ನಾವು ಚುನಾವಣೆಯನ್ನು ಮರು ನಿಗದಿ ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್'ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಆದ್ದರಿಂದ ಯಾವ ಕಾರಣಕ್ಕೂ ಪ್ರಕರಣದ ವಿಚಾರಣೆ ಮುಂದೂಡಬಾರದು ಎಂದು ನ್ಯಾಯಾಲಯವನ್ನು ಕೋರಿದರು. 

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp