ಪರಿಸರ ಮಾರಕ ಪಟಾಕಿ ವಿರುದ್ಧ ಸರ್ಕಾರ ಸಮರ: ನಿಜಕ್ಕೂ ನಗರದಲ್ಲಿ ಯಶಸ್ಸು ಕಾಣುತ್ತಾ ಗ್ರೀನ್ ಪಟಾಕಿ? 

ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಈ ಬಾರಿಯ ದೀಪಾವಳಿಯಲ್ಲಿ ಗ್ರೀನ್ ಪಟಾಕಿಗಳು ಟುಸ್ ಆಗುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಈ ಬಾರಿಯ ದೀಪಾವಳಿಯಲ್ಲಿ ಗ್ರೀನ್ ಪಟಾಕಿಗಳು ಟುಸ್ ಆಗುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿದೆ. 

ಗ್ರೀನ್ ಅಥವಾ ಹಸಿರು ಪಟಾಕಿ ಎಂದರೆ ಏನು ಎಂಬ ಬಗ್ಗೆ ಸಾಮಾನ್ಯ ಜನರಿಗೆ ಸಮರ್ಪಕ ಮಾಹಿತಿ ಸಮರ್ಪಕ ಮಾಹಿತಿ ಇಲ್ಲ. ಇದಕ್ಕೆ ಕಾರಣ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರ್ಕಾರ ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ಇನ್ನೊಂದೆಡೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗ್ರೀನ್ ಪಟಾಕಿ ಕುರಿತಂತೆ ಸರ್ಕಾರದ ಆದೇಶ ಹಾಗೂ ನಿರ್ದೇಶನಕ್ಕಾಗಿ ಕಾದು ಕುಳಿತಿದೆ ಎಂದು ಹೇಳಲಾಗುತ್ತಿದೆ. 

ವಾಯು ಹಾಗೂ ಶಬ್ಧ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಗ್ರೀನ್ ಪಟಾಕಿ ಬಳಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ವಿಚಾರ ಸಂಬಂಧ ಶೀಘ್ರಗತಿಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಮಾಲಿನ್ಯ ಮಂಡಳಿ ಸರ್ಕಾರವನ್ನು ಒತ್ತಾಯಿಸಿದ್ದು, ಒಂದು ವೇಳೆ ಸರ್ಕಾರ ಆದೇಶ ಹೊರಡಿಸದಿದ್ದಲ್ಲಿ, ಪಟಾಕಿ ಸಿಡಿಸುವ ಸಮಯ ಕಡಿಮೆ ಮಾಡುವ ಮೂಲಕ ಮಾಲಿನ್ಯ ನಿಯಂತ್ರಿಸಲು ಮಂಡಳಿ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಬೆಳಿಗ್ಗೆ 8 ರಿಂದ ರಾತ್ರಿ 10ವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. 

ಮಾಲಿನ್ಯ ಮಂಡಳಿದ ಕಾರ್ಯದರ್ಶಿ ಬಸವರಾಜ ವಿ ಪಾಟೀಲ್ ಅವರು, ಪಟಾಕಿಗಳನ್ನು ಈಗಾಗಲೇ ತಯಾರಾಗಿದ್ದು, ಸರ್ಕಾರ ಪ್ರಸ್ತುತ ಆದೇಶ ಹೊರಡಿಸಿದರೂ ಅದು ತಡವಾಗಲಿದೆ. ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ. ವಾಯು ಹಾಗೂ ಶಬ್ಧ ಮಾಲಿನ್ಯವನ್ನು ಶೇ.30ರಷ್ಟಾದರೂ ಕಡಿಮೆ ಮಾಡುವ ಉದ್ದೇಶದೊಂದಿಗೆ ಗ್ರೀನ್ ಪಟಾಕಿಗಳನ್ನು ಬಳಕೆ ಮಾಡುವಂತೆ ಸೂಚಿಸಲಾಗಿದೆ. ಆದರೆ, ಸರ್ಕಾರ ಇನ್ನೂ ಆದೇಶ ಹೊರಡಿಸಿಲ್ಲ. ಈಗ ಆದೇಶ ಹೊರಡಿಸಿದರೂ ಅದು ತಡವಾಗುತ್ತದೆ ಎಂದು ಹೇಳಿದ್ದಾರೆ. 

ಮಾಲಿನ್ಯ ಕಡಿಮೆಯಿರುವಂತಹ ಪಟಾಕಿಗಳನ್ನು ತಯಾರು ಮಾಡುವಂತೆ ಈಗಾಗಲೇ ಪಟಾಕಿ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಕೆಲ ಕಂಪನಿಗಳು ಸಿಎಸ್ಐಆರ್-ಎನ್ಇಇಆರ್'ಐ ಪ್ರಮಾಣೀಕರ ಹಾಗೂ ಲೋಗೋದೊಂದಿಗೆ ಮಂಡಳಿಯನ್ನು ಸಂಪರ್ಕಿಸುತ್ತಿವೆ. ಇವುಗಳನ್ನು ಪರಿಶೀಲನೆ ನಡೆಸಬೇಕಿದ್ದು, ಪ್ರಕ್ರಿಯೆಗೆ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದು ಮಾಲಿನ್ಯ ಮಂಡಳಿ ತಿಳಿಸಿದೆ.

ಜಾಗೃತಿ ಮೂಡಿಸಲು ಮಂಡಳಿ ವಾಯು ಹಾಗೂ ಶಬ್ಧ ಮಾಲಿನ್ಯವನ್ನು ಪರಿಶೀಲನೆ ನಡೆಸುತ್ತಲೇ ಇರುತ್ತದೆ. ಗ್ರೀನ್ ಪಟಾಕಿಗಳ ಜಾರಿ ಮುಂದಿನ ವರ್ಷವಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಪಟಾಕಿಗಳ ಮಾರಾಟ ಆರಂಭವಾಗಿದ್ದು. ಗ್ರೀನ್ ಪಟಾಕಿ ಮಾರಾಟ ಕಷ್ಟವಾಗುತ್ತದೆ ಎಂದು ಮಾರಾಟಗಾರರು ಹೇಳಿದ್ದಾರೆ. ಕಡಿಮೆ ಮಾಲೀನ್ಯವಿರುವ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರೀನ್ ಪಟಾಕಿಗಳ ಬಗ್ಗೆ ನಮಗೆ ಮಾಹಿತಿಯಿಲ್ಲ. ಈಗಾಗಲೇ ಪಟಾಕಿಗಳು ತಯಾರಾಗಿದ್ದು, ಮಾರಾಟವೂ ಆರಂಭಗೊಂಡಿದೆ. ಇದೀಗ ಯಾವುದೇ ಹೊಸ ಆದೇಶ ಜಾರಿಗೆ ತಂದರೂ ಅದು ಸಾಧ್ಯವಾಗುವುದಿಲ್ಲ ಎಂದು ಪಟಾಕಿ ವ್ಯಾಪಾರಿ ಕೃಷ್ಣಮೂರ್ತಿ ಕೆ ಹೇಳಿದ್ದಾರೆ. 

ಇನ್ನು ನ್ಯಾಯಾಲಯದ ಆದೇಶದ ಬಗ್ಗೆ ನಾಗರೀಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಲಯದ ಯಾವಾಗ ಆದೇಶ ಹೊರಡಿಸಿತ್ತು. ಆದೇಶವನ್ನು ಕಾರ್ಯರೂಪಕ್ಕೆ ತರುವುದು ದೇಶದ ಸರ್ಕಾರಿ ಇಲಾಖೆಗಳ ಕೆಲಸ. ವಾಯುಮಾಲಿನ್ಯ ಸೃಷ್ಟಿಸುವ ಪಟಾಕಿಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಆದೇಶ ತಡವಾಗಿ ಹೊರಡಿಸಿದ್ದಾರೆ. ಆದರೆ, ದೆಹಲಿಯಲ್ಲಿ ಜಾರಿಗೆ ತರಲಾಗಿದೆ. ಇಲ್ಲಿಯೂ ಜಾರಿಗೆ ತರಬೇಕೆಂದು ಲತಾ ಕೆ ಎಂಬುವವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com