ಮಂಗಳೂರು: ವೇಗವಾಗಿ ಬಂದು ಮಸೀದಿಯೊಳಗೆ ನುಗ್ಗಿದ ಓಮ್ನಿ, ಭಯಾನಕ ವಿಡಿಯೋ ವೈರಲ್!

ಬಂಟ್ವಾಳ ತಾಲೂಕಿನ ಫರಂಗಿಪೇಟೆ ಬಳಿ ಕಾರೊಂದು ವೇಗವಾಗಿ ಬಂದು ಮಸೀದಿಯೊಳಗೆ ನುಗ್ಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published: 23rd October 2019 06:57 PM  |   Last Updated: 23rd October 2019 07:27 PM   |  A+A-


Car Accident CCTV Image

ಕಾರು ಅಪಘಾತ ದೃಶ್ಯ

Posted By : Vishwanath S
Source : Online Desk

ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆ ಬಳಿ ಕಾರೊಂದು ವೇಗವಾಗಿ ಬಂದು ಮಸೀದಿಯೊಳಗೆ ನುಗ್ಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಾರುತಿ ಓಮ್ನಿ ಕಾರು ಬಿಸಿ ರಸ್ತೆಯಿಂದ ಮಂಗಳೂರಿನ ಕಡೆ ಬರುತ್ತಿದ್ದು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತ್ವಾಜಾ ಜುಮ್ಮಾ ಮಸೀದಿಯ ಒಳಗೆ ಕಾರು ನುಗ್ಗಿ ಗೋಡೆಗೆ ಏರಿ ನಿಂತಿದ್ದು ಈ ಪ್ರಕರಣದಲ್ಲಿ ಐವರು ಗಾಯಗೊಂಡಿದ್ದಾರೆ. 

ಇಸ್ಮಾಯಿಲ್ ಮತ್ತು ಸುಲೈಮಾನ್ ಎಂಬುವವರು ಪ್ರಾರ್ಥನೆ ಮುಗಿಸಿ ಹೊಸ ಬರುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಸೀದಿಯ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಈ ಭೀಕರ ಅಪಘಾತದ ವಿಡಿಯೋ ಸೆರೆಯಾಗಿದೆ. ಇನ್ನು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp