ಬೆಂಗಳೂರು: ಐಟಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ, ಆರೋಪಿಗಾಗಿ ಶೋಧ

ನಗರದ ಕ್ವೀನ್ಸ್ ರಸ್ತೆಯ ಆದಾಯ ಇಲಾಖೆ (ಐಟಿ) ಕಚೇರಿಗೆ ಬುಧವಾರ ರಾತ್ರಿ ಬಂದ ಬಾಂಬ್ ಕರೆಯಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯ ಆದಾಯ ಇಲಾಖೆ (ಐಟಿ) ಕಚೇರಿಗೆ ಬುಧವಾರ ರಾತ್ರಿ ಬಂದ ಬಾಂಬ್ ಕರೆಯಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 

ಐಟಿ ಇಲಾಖೆಯ ಉಪ ಆಯುಕ್ತರಿಗೆ ರಾತ್ರಿ 10.45ರ ಸುಮಾರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಕೂಡಲೇ ಅವರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಪೂರ್ವ ವಿಭಾಗದ 200ಕ್ಕೂ ಹೆಚ್ಚು ಪೊಲೀಸರು ಕಚೇರಿ ಬಳಿ ಧಾವಿಸಿ ಭದ್ರತೆ ಕೈಗೊಂಡಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಧಾವಿಸಿ ಪರಿಶೀಲನೆ ನಡೆಸಿದಾಗ ಅದು ಹುಸಿ ಕರೆ ಎಂಬುದು ಗೊತ್ತಾಗಿದೆ.

ಪ್ರಾಥಮಿಕ ಮಾಹಿತಿ ಮೇರೆಗೆ ಪ್ರೋಟಾನ್ ಡಾರ್ಕ್‌ನೆಟ್ ಮೂಲಕ ಇ-ಮೇಲ್ ಕಳುಹಿಸಲಾಗಿದ್ದು, ಇಲಾಖೆಯ ಉದ್ಯೋಗಿಯೊಬ್ಬರು  ಇ-ಮೇಲ್ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬೆಳಿಗ್ಗೆ ಉದ್ಯೋಗಿಗಳು ಕಚೇರಿಯೊಳಗೆ ಹೋಗಲು ಹಿಂದೇಟು ಹಾಕಿದರು. ಆಗ ಅವರಿಗೆ ಪೊಲೀಸರು ಹಾಗೂ ಇಲಾಖಾಧಿಕಾರಿಗಳು ಧೈರ್ಯ ತುಂಬಿ ಕೆಲಸಕ್ಕೆ ಕಳುಹಿಸಿದರು.

ಹಿಂದೆ ಕೂಡ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪ್ರಕರಣ ದಾಖಲಿಸಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಇ-ಮೇಲ್ ಕಳುಹಿಸಿದ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com