ಗಂಗಾವತಿ: ವರ್ಷದಲ್ಲೆ ಕಿತ್ತುಹೋದ ಕಾಮಗಾರಿ, ಯಾವುದೇ ಕ್ಷಣ ಪ್ರಾಣಕ್ಕೆ ಕುತ್ತು

ತುಂಗಭದ್ರಾ ನದಿಗೆ ಜಲಾಶಯದ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಗಂಗಾವತಿ- ಕಂಪ್ಲಿ ಮಧ್ಯದ ಸೇತುವೆ ರಕ್ಷಣಾ ಗೋಡೆಯ ಬಹುತೇಕ ಭಾಗ ಹಾನಿಗೀಡಾಗಿದ್ದು, ಯಾವುದೇ ಕ್ಷಣದಲ್ಲಿ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಗಳಿವೆ.
ಗಂಗಾವತಿ: ವರ್ಷದಲ್ಲೆ ಕಿತ್ತುಹೋದ ಕಾಮಗಾರಿ, ಯಾವುದೇ ಕ್ಷಣ ಪ್ರಾಣಕ್ಕೆ ಕುತ್ತು
ಗಂಗಾವತಿ: ವರ್ಷದಲ್ಲೆ ಕಿತ್ತುಹೋದ ಕಾಮಗಾರಿ, ಯಾವುದೇ ಕ್ಷಣ ಪ್ರಾಣಕ್ಕೆ ಕುತ್ತು

ಗಂಗಾವತಿ: ತುಂಗಭದ್ರಾ ನದಿಗೆ ಜಲಾಶಯದ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಗಂಗಾವತಿ- ಕಂಪ್ಲಿ ಮಧ್ಯದ ಸೇತುವೆ ರಕ್ಷಣಾ ಗೋಡೆಯ ಬಹುತೇಕ ಭಾಗ ಹಾನಿಗೀಡಾಗಿದ್ದು, ಯಾವುದೇ ಕ್ಷಣದಲ್ಲಿ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಗಳಿವೆ. 

ಕಳೆದ ವರ್ಷದ ಪ್ರವಾಹದಿಂದಾಗಿ ಹಾನಿಗೀಡಾಗಿದ್ದ ರಕ್ಷಣಾ ಗೋಡೆಯನ್ನು ಲೋಕೋಪಯೋಗಿ ಇಲಾಖೆಯಿಂದ ಸುಮಾರು 18 ಲಕ್ಷ ರೂಪಾಯಿ ಮೊತ್ತದಲ್ಲಿ ದುರಸ್ತಿ ಮಾಡಿಸಲಾಗಿತ್ತು. ಆದರೆ ಕಾಮಗಾರಿ ಮಾಡಿದ ಒಂದೇ ವರ್ಷಕ್ಕೆ ಇಡೀ ರಕ್ಷಣಾ ಸರಳು ಕಿತ್ತು ಹೋಗಿದೆ. 

ಕಳೆದ ನಾಲ್ಕು ದಿನಗಳಿಂದ ಸೇತುವೆಯ ಮೇಲೆ ಪ್ರವಾಹಿಸುತ್ತಿದ್ದ ನೀರು ಈಗ ಕಡಿಮೆಯಾಗಿದ್ದು, ಪಾದಾಚಾರಿ ಹಾಗೂ ಲಘು ವಾಹನಗಳ ಓಡಾಡಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇಡೀ ಸೇತುವೆ ಶಿಥೀಲಾವಸ್ಥೆಯಲ್ಲಿದ್ದು ಯಾವುದೇ ಸಂದರ್ಭದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ವರದಿ: ಶ್ರೀನಿವಾಸ್ .ಎಂ.ಜೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com