ಏಕತಾ ಪ್ರತಿಮೆ ರೀತಿಯಲ್ಲಿ ರಾಮನಗರದಲ್ಲಿ ಇಬ್ಬರು ಸ್ವಾಮೀಜಿಗಳ ಬೃಹತ್ ಪ್ರತಿಮೆ ಸ್ಥಾಪನೆ!

ಪ್ರಪಂಚದಲ್ಲೇ ಅತಿ ದೊಡ್ಡ ಪ್ರತಿಮೆ ಎಂದು ಖ್ಯಾತವಾಗಿರುವ ಗುಜರಾತಿನ ಏಕತಾ ಪ್ರತಿಮೆಯಂತೆ ರಾಮನಗರದಲ್ಲೂ ಇಬ್ಬರು ಪ್ರಭಾವಿ ಸಮುದಾಯದ ಸ್ವಾಮಿಜಿಗಳ ಬೃಹತ್ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ಬೆಂಗಳೂರು: ಪ್ರಪಂಚದಲ್ಲೇ ಅತಿ ದೊಡ್ಡ ಪ್ರತಿಮೆ ಎಂದು ಖ್ಯಾತವಾಗಿರುವ ಗುಜರಾತಿನ ಏಕತಾ ಪ್ರತಿಮೆಯಂತೆ ರಾಮನಗರದಲ್ಲೂ ಇಬ್ಬರು ಪ್ರಭಾವಿ ಸಮುದಾಯದ ಸ್ವಾಮಿಜಿಗಳ ಬೃಹತ್ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ.

25 ಕೋಟಿ ರು ವೆಚ್ಚದಲ್ಲಿ  111 ಅಡಿ ಎತ್ತರದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜೀ ಹಾಗೂ ಆದಿ ಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ,

ನಡೆದಾಡುವ ದೇವರು ಎಂದೇ ಪ್ರಸಿದ್ದವಾಗಿದ್ದ  ಶಿವಕುಮಾರ ಸ್ವಾಮೀಜಿ ಅವರ ಸ್ವಗ್ರಾಮ ಮಾಗಡಿ ತಾಲೂಕಿನ ವೀರಾಪುರದಲ್ಲಿ 111 ಅಡಿ  ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು , ಸಿದ್ದಗಂಗಾ ಶ್ರೀಗಳು ತಮ್ಮ 111ನೇ ವಯಸ್ಸಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ  ಪ್ರತಿಮೆ ನಿರ್ಮಾಣಕ್ಕಾಗಿ 25 ಕೋಟಿ ರು ಹಣ ಮೀಸಲಿಡುವುದಾಗಿ ಘೋಷಿಸಿದ್ದರು.

ಶಿವಕುಮಾರ ಸ್ವಾಮೀಜಿಗಳ 111 ಅಡಿ ಪ್ರತಿಮೆ ಹಾಗೂ ಆದಿ ಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿಗಳ ಸ್ವಗ್ರಾಮ ಬಾನಂದೂರಿನಲ್ಲಿ ಶ್ರೀಗಳ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com