ಆನ್ ಲೈನ್  ಹನಿಟ್ರ್ಯಾಪ್: ಮಗಳ ಸೆಕ್ಸ್ ವಿಡಿಯೋ ತೋರಿಸಿ 20 ಲಕ್ಷ ಸುಲಿಗೆ ಮಾಡಿದ ಮಹಾತಾಯಿ!

ಮಗಳ ಸೆಕ್ಸ್ ವಿಡಿಯೋ ತೋರಿಸಿ ಪ್ರೊಫೆಸರ್ ಒಬ್ಬರಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಬೆಂಗಳೂರಿನ ಮಹಾತಾಯಿ  ಹಾಗೂ ಆಕೆಯ ಸ್ನೇಹಿತನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಗಳ ಸೆಕ್ಸ್ ವಿಡಿಯೋ ತೋರಿಸಿ ಪ್ರೊಫೆಸರ್ ಒಬ್ಬರಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಬೆಂಗಳೂರಿನ ಮಹಾತಾಯಿ  ಹಾಗೂ ಆಕೆಯ ಸ್ನೇಹಿತನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಲೀನಾ ಕವಿತಾ ಹಾಗೂ ಪ್ರಮೋದ್ ಕುಮಾರ್ ಬಂಧಿತ ಆರೋಪಿಗಳು. ಲೀನಾ ಕವಿತಾ ಆಸ್ಪತ್ರೆಗಳಿಗೆ ನರ್ಸ್ ಗಳನ್ನು ಒದಗಿಸುವ ಏಜೆನ್ಸಿ ಇಟ್ಟುಕೊಂಡಿದ್ದರೆ, ಸಾಪ್ಟ್ ವೇರ್ ಕಂಪನಿಯೊಂದನ್ನು ನಡೆಸುತ್ತಿದ್ದ ಪ್ರಮೋದ್ ಕುಮಾರ್ , ನಷ್ಟದಿಂದಾಗಿ ಮುಚ್ಚಿದ್ದರು ಎನ್ನಲಾಗಿದೆ. 

ಪ್ರೊಫೆಸರ್ ಮಗ ಹಾಗೂ ಲೀನಾಳ ಪುತ್ರಿ ಇಬ್ಬರು ಡೆಟಿಂಗ್ ನಲ್ಲಿದ್ದು, ದೈಹಿಕ ಸಂಬಂಧ ಬೆಳೆಸಿರುವ ವಿಡಿಯೋವನ್ನು ಲೀನಾ ರೆಕಾರ್ಡ್ ಮಾಡಿಕೊಂಡಿದ್ದಳು. ನಂತರ  ಅದನ್ನು ಲೀನಾ ತಾಯಿ ಬಳಕೆ ಮಾಡಿಕೊಂಡಿದ್ದು, ಪ್ರಮೋದ್ ಕುಮಾರ್ ಜೊತೆಗೆ ಸೇರಿ ಬ್ಲಾಕ್ ಮೇಲ್ ಮಾಡತೊಡಗಿದ್ದಾರೆ. 1 ಕೋಟಿ ರೂಪಾಯಿ ನೀಡಿದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಾಗೂ ವಿಡಿಯೋಗಳನ್ನು ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಬೆದರಿದ ಪ್ರೊಫೆಸರ್ ಜೂನ್ ತಿಂಗಳಲ್ಲಿ ಲೀನಾಳ ಬ್ಯಾಂಕ್ ಅಕೌಂಟ್ ಗೆ 20 ಲಕ್ಷ ರೂ. ವರ್ಗಾಯಿಸಿದ್ದಾರೆ. ನಂತರ ಲೀನಾಳ ಅಕೌಂಟ್ ಗೆ 40 ಲಕ್ಷ ವರ್ಗಾಯಿಸುವಂತೆ ಸಂದೇಶ ಕಳುಹಿಸಲಾಗಿದೆ. ಅಲ್ಲದೇ ಪ್ರೊಫೆಸರ್ ಕೆಲಸ ಮಾಡುತ್ತಿದ್ದ ಕಾಲೇಜಿಗೂ ಹೋಗಿ ಬೆದರಿಕೆ ಹಾಕಲಾಗಿದೆ. ಆದಾಗ್ಯೂ, ಹಣ ನೀಡದಿದ್ದಾಗ ಅಕ್ಟೋಬರ್ 15 ಹಾಗೂ 16 ರಂದು ಕಾಲೇಜಿಗೆ ಹೋಗಿ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅವಾಚ್ಯ ಶಬ್ದಗಳಿಂದ ಪ್ರೊಫೆಸರ್ ಅವರನ್ನು ನಿಂಧಿಸಲಾಗಿದೆ. 

ನಂತರ ಆ ಪ್ರೊಫೆಸರ್ ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com