ಹಲ್ಲುಮುರಿದಿದ್ದ ಸೇಡಿಗೆ ತಲೆಯನ್ನೇ ತೆಗೆದರು..!  

ಇದೇ ತಿಂಗಳ ೧೯ ರಂದು ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಹಾಡಹಗಲೇ ನಡೆದಿದ್ದ ಕೊಲೆ ರಹಸ್ಯ ಬಯಲಾಗಿದೆ.
 

Published: 24th October 2019 01:29 PM  |   Last Updated: 24th October 2019 01:29 PM   |  A+A-


Police solve KM Doddi murder case

ಆರೋಪಿಗಳನ್ನು ಬಂಧಿಸಿದ ಪೊಲೀಸರು

Posted By : Manjula VN
Source : Online Desk

ಮಂಡ್ಯ: ಇದೇ ತಿಂಗಳ ೧೯ ರಂದು ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಹಾಡಹಗಲೇ ನಡೆದಿದ್ದ ಕೊಲೆ ರಹಸ್ಯ ಬಯಲಾಗಿದೆ.

ಜಗಳದಲ್ಲಿ ಹಲ್ಲು‌ಮುರಿದ ಸೇಡಿಗೆ ತಲೆಯನ್ನೇ ತೆಗೆದರು ಎಂಬ ಸತ್ಯಾಂಶ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ.

ಕೆ.ಎಂ.ದೊಡ್ಡಿಯ ನಿವಾಸಿ ನವೀನ್  ಕುಟ್ಟಿ(೩೦) ಯನ್ನು ಜಗಳದಲ್ಲಿ ತನ್ನ ಹಲ್ಲು ಮುರಿದಿದ್ದ ಸೇಡಿಗೆ ಶಿವಪುರದ ಪ್ರವೀಣ್ @ ಕಡ್ಡಿಯು ಸ್ನೇಹಿತ ರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂಬ‌ ರಹಸ್ಯ ಬಯಲಾಗಿದೆ.

ಇದೇ ತಿಂಗಳ ೧೯ ರಂದು ಕೆ.ಎಂ.ದೊಡ್ಡಿಯ ಹಲಗೂರು ಸರ್ಕಲ್ನಲ್ಲಿ ನವೀನ್ ನನ್ನು ಹಾಡಹಗಲೇ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಅಟ್ಟಾಡಿಸಿಕೊಂಡು ಲಾಂಗ್, ಮಚ್ಚುಗಳಿಂದ ಶಿವಪುರದ ಪ್ರವೀಣ್ @ಕಡ್ಡಿಯು ತನ್ನ ಸ್ನೇಹಿತರಾದ ಮಠದದೊಡ್ಡಿಯ ಎಂ.ಎನ್.ನಿರಂಜನ್  ಡಾಲಿ, ಕ್ಯಾತಘಟ್ಟದ ಕೆ.ಪಿ.ಕಾರ್ತಿಕ್  ಚಿಟ್ಟೆ, ಮಂಡ್ಯದ ಗುತ್ತಲಿನ ಇಂದಿರಾ ಕಾಲೋನಿಯ ಜೆ.ಅನಂತಕುಮಾರ್, ಸಾಹುಕಾರ್ ಚನ್ನಯ್ಯ ಬಡಾವಣೆಯ ಕೆ.ಪಿ.ಸಚಿನ್ ಗೌಡ ಅವರೊಟ್ಟಿಗೆ ಬೈಕ್ ನಲ್ಲಿ ಬಂದು ಕೊಲೆಮಾಡಿ ಪರಾರಿಯಾಗಿದ್ರು.ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಎಂ ದೊಡ್ಡಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ನೋಡಲು ಜನಸಾಗರ: 
ಕೊಲೆ ನಡೆದ ಸ್ಥಳಕ್ಕೆ ಮಹಜರಿಗಾಗಿ ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಬರೋ ವಿಚಾರ ತಿಳಿಯುತ್ತಿದ್ದಂತೆ ಕೆ.ಎಂ.ದೊಡ್ಡಿಯ ಪ್ರಮುಖ ವೃತ್ತದಲ್ಲಿ ಬುಧವಾರ ಜನಸಾಗರವೇ ಸೇರಿತ್ತು. ಚಿತ್ರ ನಟರನ್ನು ನೋಡಲೋ, ರಾಜಕಾರಣಿಗಳ ಕಾರ್ಯಕ್ರಮಕ್ಕೋ ಅಪಾರ ಜನಸ್ತೋಮ ಬರುವ ರೀತಿಯಲ್ಲಿಯೆ ನವೀನ್ ಕೊಲೆ ಆರೋಪಿಗಳನ್ನು ನೋಡಲು ಜನಸಾಗರವೇ ಸೇರಿತ್ತು 

ಪೊಲೀಸರ ಹರಸಾಹಸ;
ಆರೋಪಿಗಳಾದ ಪ್ರವೀಣ್, ಎಂ.ಎನ್.ನಿರಂಜನ್, ಕೆ.ಪಿ.ಕಾರ್ತಿಕ್, ಜೆ.ಅನಂತಕುಮಾರ್ ಹಾಗೂ ಕೆ.ಪಿ.ಸಚಿನ್ ಗೌಡನನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ಮಾಡುವ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ತಲೆತೆಗೆದು ಸೇಡು ತೀರಿಸಿಕೊಂಡ:
ಕೊಲೆಯಾದ ನವೀನ್ ಹಾಗೂ ಪ್ರವೀಣ್ ಆಲಿಯಾಸ್ ಕಡ್ಡಿ ಜಗಳ ಮಾಡಿಕೊಂಡಿದ್ರಂತೆ. ಈ ಸಂದರ್ಭದಲ್ಲಿ ಕಡ್ಡಿಯ ಹಲ್ಲು ಮುರಿದು ಇಬ್ಬರೂ ಸಂಧಾನ ಮಾಡಿಕೊಂಡಿದ್ರಂತೆ. ಕೊಲೆಯಾದ ನವೀನ್ ಹಲ್ಲು ಮುರಿದುಕೊಂಡ ಕಡ್ಡಿಗೆ ಚಿಕಿತ್ಸೆ ಕೊಡಿಸಿ, ಹಲ್ಲನ್ನು ಕಟ್ಟಿಸಿಕೊಡಬೇಕಾಗಿತ್ತು. ಆದರೆ ಹಲ್ಲು ಕಟ್ಟಿಸಿಕೊಡದ ಕಾರಣ ತನ್ನ ಸ್ನೇಹಿತರ ಜೊತೆಗೂಡಿ ನವೀನ್ ತಲೆ ತೆಗೆದಿದ್ದಾರೆ ಅಂತಾ ವಿಚಾರಣೆಯಿಂದ ತಿಳಿದು ಬಂದಿದೆ

ವರದಿ: ನಾಗಯ್ಯ

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp