ರಾಜೀನಾಮೆ ಕಿತ್ತುಕೊಳ್ಳಲಾಗದ ಹಕ್ಕು: ಸುಪ್ರೀಂಗೆ ಅನರ್ಹ ಶಾಸಕರು

ರಾಜೀನಾಮೆ ಕಿತ್ತುಕೊಳ್ಳಲಾಗದ ಹಕ್ಕಾಗಿದೆ ಎಂದು ಅನರ್ಹ ಶಾಸಕರು ಸುಪ್ರೀಂಕೋರ್ಟ್'ಗೆ ಬುಧವಾರ ತಿಳಿಸಿದ್ದಾರೆ. 
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ರಾಜೀನಾಮೆ ಕಿತ್ತುಕೊಳ್ಳಲಾಗದ ಹಕ್ಕಾಗಿದೆ ಎಂದು ಅನರ್ಹ ಶಾಸಕರು ಸುಪ್ರೀಂಕೋರ್ಟ್'ಗೆ ಬುಧವಾರ ತಿಳಿಸಿದ್ದಾರೆ. 

ರಾಜೀನಾಮೆ ನೀಡಿದ್ದರೂ ಅಂಗೀಕರಿಸದೇ 15ನೇ ವಿಧಾನಸಭೆಯಿಂದ ಅನರ್ಹಗೊಳಿಸಿದ್ದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮವನ್ನು ಪ್ರಶ್ನಿಸಿ 15 ಶಾಸಕರು ಸಲ್ಲಿಸಿರುವ ಅರ್ಜಿಯ ಅಂತಿಮ ಸುತ್ತಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿನ್ನೆ ನಡೆಸಿತ್ತು. 

ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿಯವರು ತಮ್ಮ ವಾದ ಮುಂದುವರೆಸಿದರು. ಈ ವೇಳೆ ಸದನ ಮನೆಯಲ್ಲಿ ಸದಸ್ಯರಿಗೆ ರಾಜೀನಾಮೆ ನೀಡುವ ಹಕ್ಕಿದೆ. ಅದನ್ನು ಯಾರಿಂದರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ದೇವಾಲಯದಲ್ಲಿ ಬಲವಂತ ಹಾಗೂ ಬಂದೂಕು ಇರಬಾರದು. ಆದರೆ, ಇದಕ್ಕೆ ಅಪವಾದ ತರಲಾಗಿದೆ. ಒಂದು ವೇಳೆ ಅನರ್ಹತೆ ಚಾಲನೆಯಲ್ಲಿದ್ದರೂ, ಚುನಾವಣೆ ಬಂದಾಗ ಅನರ್ಹ ಶಾಸಕರು ಸ್ಪರ್ಧಿಸಲು ಇಚ್ಛಿಸಿದ್ದೇ ಆದರೆ, ಅನರ್ಹತೆಗೆ ಚುನಾವಣೆ ತೆರೆ ಎಳೆಯುತ್ತದೆ. ಒಂದು ವೇಳೆ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸದೇ ಹೋದರೆ, ಅನರ್ಹತೆ 2023ರವರೆಗೂ ಮುಂದುವರೆಯಲಿದೆ ಎಂದು ತಿಳಿಸಿದರು. 

ಅನರ್ಹ ಶಾಸಕರು ಮುಂಬೈಗೆ ತೆರಳಿರುವ ಕುರಿತು ಬಂದ ಆರೋಪಗಳೆಲ್ಲವೂ ಸರಿಯಲ್ಲ. ರಾಜೀನಾಮೆ ನೀಡಿದ ಬಳಿಕವೇ ಅನರ್ಹ ಶಾಸಕರು ವಿಮಾನ ಹತ್ತಿದ್ದರು. ರಾಜೀನಾಮೆ ನೀಡಿರುವ ಶಾಸಕರು ಚುನಾವಣೆ ಎದುರಿಸುವ ಧೈರ್ಯ ಪ್ರದರ್ಶಿಸಿದರೆ, ಅದಕ್ಕೆ ಅನುಮತಿ ನೀಡಬೇಕು ಎಂದು ತಿಳಿಸಿದರು. 

ಬಳಿಕ ಮಾತನಾಡಿರುವ ಹಿರಿಯ ವಕೀಲ ಕೆ.ವಿ.ವಿಶ್ವನಾಥ್ ಅವರು, ಶಾಸಕರು ಸದನದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದಾರೆ. ರಾಜೀನಾಮೆ ಸ್ವಯಂಪ್ರೇರಣೆಯಲ್ಲ, ಪ್ರಾಮಾಣಿಕವಾಗಿಲ್ಲವೆಂದು ಸ್ಪೀಕರ್'ಗೆ ಎನಿಸಿದರೆ, ಅದಕ್ಕೆ ಸೂಕ್ತ ರೀತಿಯ ಕಾರಣ ನೀಡಬೇಕಿತ್ತು. ಆದರೆ, ಆ ಕೆಲಸವನ್ನು ಸ್ಪೀಕರ್ ಮಾಡಿಲಿಲ್ಲ ಎಂದರು,

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com