ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್ - 2000 ರು ಗೌರವ ಧನ ಹೆಚ್ಚಳ

ಅಂಗನವಾಡಿ‌ ಕಾರ್ಯಕರ್ತೆಯರಿಗೆ ಸರ್ಕಾರ ದೀಪಾವಳಿ ಬಂಪರ್ ಕೊಡುಗೆ ನೀಡಿದೆ.ಸುಮಾರು 2000 ರೂ ಗೌರವಧನ ಹೆಚ್ಚಿಸುವ ಮೂಲಕ ದೀಪಾವಳಿಗೆ ಬಹುಮಾನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಂಗನವಾಡಿ‌ ಕಾರ್ಯಕರ್ತೆಯರಿಗೆ ಸರ್ಕಾರ ದೀಪಾವಳಿ ಬಂಪರ್ ಕೊಡುಗೆ ನೀಡಿದೆ.ಸುಮಾರು 2000 ರೂ ಗೌರವಧನ ಹೆಚ್ಚಿಸುವ ಮೂಲಕ ದೀಪಾವಳಿಗೆ ಬಹುಮಾನ ನೀಡಿದೆ.
  
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ,ರಾಜ್ಯದಲ್ಲಿ 62, 580 ಜನ ಅಂಗನವಾಡಿ ಕಾರ್ಯಕರ್ತರು ಸೇರಿ ಒಟ್ಟು 1.28 ಲಕ್ಷ  ಕಾರ್ಯಕರ್ತೆಯರಿದ್ದಾರೆ. 2018 ರ ಅಕ್ಟೋಬರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಲಾಗಿತ್ತು.ಈ ಪೈಕಿ  40% ರಾಜ್ಯ, 60% ಕೇಂದ್ರ ಗೌರವ ಧನ ನೀಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ 1500 ರೂ ಹಾಗೂ 500 ರೂ ಸೇರಿಸಿ 2000 ರೂ. ಗೌರವಧನ  ಹೆಚ್ಚಳ‌ ಮಾಡಲಾಗು ವುದು.‌ ಒಟ್ಟು ಈಗ 10,000 ರೂ ನೀಡ ಲಾಗುವುದು. 1/10/2018 ರಿಂದ ಈ ಆದೇಶ ಪೂರ್ವಾನ್ವಯವಾಗು ವಂತೆ ಜಾರಿಗೆ ಬರಲಿದೆ.ಒಂದು ವರ್ಷ ತಡೆ ಹಿಡಿದ ಗೌರವಧನ ಬರಲಿದೆ ಎಂದು ಸ್ಪಷ್ಟಪಡಿ ಸಿದರು.
  
ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 8000 ರು.ಇತ್ತು, ಈಗ ರಾಜ್ಯ ಸರ್ಕಾರದ 1500 ರು. ಮತ್ತು ಕೇಂದ್ರ ಸರ್ಕಾರದ 500 ರು. ಪಾಲು ಸೇರಿ ಈಗ 10,000 ಗೌರವ ಧನ ಸಿಗಲಿದೆ‌. ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 4750 ರು.ಗೌರವ ಧನ ಇತ್ತು.ಈಗ ರಾಜ್ಯ ಸರ್ಕಾರದ 1250 ರು.ಕೇಂದ್ರ ಸರ್ಕಾರದ 500 ರು. ಸೇರಿ ಒಟ್ಟು 6500 ರು. ಗೌರವಧನ ಸಿಗಲಿದೆ ಎಂದರು.
  
ಅಂಗನವಾಡಿ ಸಹಾಯಕಿಯರಿಗೆ ಈ ಹಿಂದೆ 4000 ರು. ಗೌರವ ಧನ ಇತ್ತು. ಈಗ ರಾಜ್ಯ ಸರ್ಕಾರದಿಂದ 1000 ರು., ಕೇಂದ್ರ ಸರ್ಕಾರದಿಂದ 500 ರು. ಸೇರಿ ಒಟ್ಟು 5500 ರು. ಗೌರವಧನ ಸಿಗಲಿದೆ.10-15% ಅಪೌಷ್ಠಿಕತೆಯ ಮಕ್ಕಳು ಅಂಗನವಾಡಿಗೆ ಬರು ತ್ತಿವೆ. ಆರೋಗ್ಯ,ಗ್ರಾಮೀಣಾಭಿವೃದ್ಧಿ, ಪೊಲೀಸ್ ಇಲಾಖೆ ಹಾಗೂ ನಮ್ಮ‌ ಇಲಾಖೆ ಗಳು ಜೊತೆಗೂಡಿ ಕೆಲಸ ಮಾಡಬೇಕಿದೆ.ಅದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾ ಗಿದೆ. ಎಲ್ಲ ದೃಷ್ಟಿಕೋನದಿಂದ ಮಕ್ಕಳ ಬೆಳವಣಿಗೆಗೆ ಸಿದ್ಧತೆ ಮಾಡಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಜೊತೆ ಚರ್ಚೆ ಕೂಡ ಮಾಡಲಾಗಿದೆ. ಮೊಬೈಲ್ ಆಪ್ ಮೂಲಕ ರಾಜ್ಯದ ಯಾವುದೇ ಮಗು ಅಪೌಷ್ಠಿಕತೆಯ ವಿಚಾರದಲ್ಲಿ ಹೇಗೆ ಇದೆ ಎಂದು ಕುಳಿತಲ್ಲೇ ನೋಡಬಹುದು‌ ಎಂದು ಅವರು ತಿಳಿಸಿದರು.
  
ಆದರೆ ಇದೂವರೆಗೆ ಅದು‌ ಕರ್ನಾಟಕಕ್ಕೆ ಬಂದಿರಲಿಲ್ಲ.ಅದು ಯಾಕೆ ಬಂದಿರಲಿ ಲ್ಲ ಗೊತ್ತಿಲ್ಲ. ಈಗ ಅದನ್ನ ಸಂಪೂರ್ಣವಾಗಿ ಸಮರ್ಥವಾಗಿ ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು‌ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com