ಆರ್‌ಸಿಇಪಿ ಒಪ್ಪಂದ: ಯಡಿಯೂರಪ್ಪ ಸರ್ವಪಕ್ಷ ಸಭೆ ಕರೆಯಲಿ- ಸಿದ್ದರಾಮಯ್ಯ

ಆರ್‌ಸಿಇಪಿ ಒಪ್ಪಂದ ಸಂಬಂಧ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ, ಡಿವಿಸದಾನಂದಗೌಡ
ಸಿದ್ದರಾಮಯ್ಯ, ಡಿವಿಸದಾನಂದಗೌಡ

ಬೆಂಗಳೂರು: ಆರ್‌ಸಿಇಪಿ ಒಪ್ಪಂದ ಜಾರಿಯಾಗದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಂಸದರ ನಿಯೋಗ ಕರೆದೊಯ್ಯಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕೇವಲ ಸಂಸದರನ್ನು ಕರೆದುಕೊಂಡು ಹೋದರಷ್ಟೆ ಸಾಲದು. ಅದಕ್ಕಿಂತ ಮೊದಲು ರೈತರ ಮುಖಂಡರ ಜೊತೆ ಸರ್ಕಾರ ಸಭೆ ನಡೆಸಬೇಕು. ಸರ್ವ ಪಕ್ಷ ಸಭೆ ಕರೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದ ಎರಡನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಹಸಿವು ನಿವಾರಣೆಯಾಗದೆ ಹೋದರೆ ಆರೋಗ್ಯವಂತ ಸಮಾಜ ‌ನಿರ್ಮಾಣ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಮತ್ತೊಮ್ಮೆ ಹಸಿರುಕ್ರಾಂತಿಯಾಗಬಹುದು ಎಂದರು

ನವೆಂಬರ್ 4 ರಂದು ಆರ್‌ಸಿಇಪಿ ಒಪ್ಪಂದ  ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ‌ ಈಗಾಗಲೇ ಉತ್ಪಾದನಾ‌ ಕ್ಷೇತ್ರ, ಆರ್ಥಿಕ ಕ್ಷೇತ್ರ ಕುಸಿತವಾಗಿದೆ‌‌, ಇನ್ನು ಪಶುಸಂಗೋಪನೆ ಅವಲಂಬಿಸಿರುವ ಹತ್ತು ಕೋಟಿ ಜನ ನಿರುದ್ಯೋಗಿಗಳಾಗಬಹುದು. ಈಗಲೇ ಕೃಷಿಕ್ಷೇತ್ರ ಕುಂಠಿರವಾಗಿದೆ. ಕೃಷಿಕ್ಷೇತ್ರದಲ್ಲಿ ಯುವಕರನ್ನು ಆಕರ್ಷಿಸದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು‌

ಅಂಕಿಅಂಶಗಳ ಪ್ರಕಾರ,  ಕರ್ನಾಟಕದಲ್ಲಿ ಹೈನುಗಾರಿಕೆ ದೊಡ್ಡ ಉಪಕಸುಬು ಆಗಿದೆ. ಸುಮಾರು 78 ಲಕ್ಷ ಲೀ.ಹಾಲು ಪ್ರತಿದಿನ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ದೇಶದ ಶೇ. 52ರಷ್ಟು ಜನ ಕೃಷಿಕಾರ್ಮಿಕರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಸುಮಾರು ಒಂದೂವರೆ ಕೋಟಿ ಕರ್ನಾಟಕದಲ್ಲಿ  ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, 28 ಲಕ್ಷ ಮಹಿಳೆಯರೇ ಹಾಲು ಕರೆಯುತ್ತಿದ್ದಾರೆ. ಒಂದು ವೇಳೆ ಈ ಒಪ್ಪಂದ ಜಾರಿಯಾದರೆ ಮುಕ್ತ ವ್ಯಾಪಾರ ನಿಂತುಹೋಗುತ್ತದೆ ಎಂದರು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಿಂದ ಹಾಲು ಹಾಲಿನ ಉತ್ಪಾದನೆ ಭಾರತಕ್ಕೆ ಏನಾದರೂ ಬಂದುಬಿಟ್ಟರೆ ನಮ್ಮ ದೇಶದ ಹೈನುಗಾರಿಕೆ, ಪಶುಸಂಗೋಪನೆ ಮುಚ್ಚಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಈಗ ಆಮದು ನೀತಿ ಇದ್ದೇ ಜಪಾನ್, ಚೀನಾ, ವಿಯೆಟ್ನಾಂ ಗೆ ನಮ್ಮ ದೇಶ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದರು.

ಆರ್‌ಸಿಇಪಿ ಒಪ್ಪಂದ ಜಾರಿಯಾಗದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಂಸದರ ನಿಯೋಗ ಕರೆದೊಯ್ಯಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕೇವಲ ಸಂಸದರನ್ನು ಕರೆದುಕೊಂಡು ಹೋದರಷ್ಟೆ ಸಾಲದು. ಅದಕ್ಕಿಂತ ಮೊದಲು ರೈತರ ಮುಖಂಡರ ಜೊತೆ ಸರ್ಕಾರ ಸಭೆ ನಡೆಸಬೇಕು. ಸರ್ವಪಕ್ಷ ಸಭೆ ಕರೆಯಬೇಕು ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಯಲಹಂಕ ಶಾಸಕ ವಿಶ್ವನಾಥ್ ಗೆ ಆಗ್ರಹಿಸಿದ ಸಿದ್ದರಾಮಯ್ಯ, ತಮ್ಮ ಆಗ್ರಹವನ್ನು ಮುಖ್ಯಮಂತ್ರಿಗೆ ಹೇಳಬೇಕು ಎಂದರು.

ಬಿಜೆಪಿ ಶಾಸಕ ವಿಶ್ವನಾಥ್ ಮಾತನಾಡಿ, ಆರ್‌ಸಿಇಪಿ ಒಪ್ಪಂದದ ಬಗ್ಗೆ ಊಹಾಪೋಹ ಸುದ್ದಿಗಳು ಬರುತ್ತಿವೆ. ಕೇಂದ್ರ ಸರ್ಕಾರ ರೈತರ ಪರವಾಗಿಯೇ ಇದೆ. ಸಿದ್ದರಾಮಯ್ಯ ವೇದಿಕೆಯಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com