ನಾಗಮಂಗಲ: ಚಿರತೆ ದಾಳಿ, ಹತ್ತು ಕುರಿಗಳ ಸಾವು

ಚಿರತೆಯೊಂದು ದಾಳಿ ಮಾಡಿ ಹತ್ತು ಕುರಿಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಗೌರಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
10 ಕುರಿಗಳ ಸಾವು
10 ಕುರಿಗಳ ಸಾವು

ಮಂಡ್ಯ: ಚಿರತೆಯೊಂದು ದಾಳಿ ಮಾಡಿ ಹತ್ತು ಕುರಿಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಗೌರಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗೌರಿ ಕೊಪ್ಪಲು ಗ್ರಾಮದ ಕಬ್ಬಾಳಮ್ಮ ದೇವಸ್ಥಾನದ ಬಳಿ ನಿನ್ನೆ ರಾತ್ರಿ 9 ಗಂಟೆಯಲ್ಲಿ ಸುರೇಶ್ ಎಂಬುವವರಿಗೆ ಸೇರಿದ ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಕುರಿಗಳನ್ನು ಹೊತ್ತೊಯ್ದಿದೆ.

ಮತ್ತೆ ತನ್ನ ಮರಿಗಳೊಂದಿಗೆ ಬಂದ ಚಿರತೆ 8 ಕುರಿಗಳ ಮೇಲೆ ದಾಳಿ ನಡೆಸಿದೆ, ರಕ್ತಸ್ರಾವದಿಂದ ಗಾಯಗೊಂಡು ಸ್ಥಳದಲ್ಲಿಯೇ 8 ಕುರಿಗಳು ಸಾವನ್ನಪ್ಪಿದ್ದು, ಎರಡು ಕುರಿಗಳನ್ನು ಚಿರತೆ ಹೊತ್ತೊಯ್ದಿದೆ. 

ಗ್ರಾಮದ ಸುತ್ತ ಮುತ್ತ ಇರುವಂತಹ ಮುದ್ದು ಲಿಂಗನಕೊಪ್ಪಲು ತಿಟ್ಟು ಹಾಗೂ ಮುತ್ತರಾಯನ ತಿಟ್ಟು ಕಾಡಿನಲ್ಲಿ  ಚಿರತೆಯ ಹಿಂಡು ಬೀಡು ಬಿಟ್ಟಿದ್ದು, ಹಲವು ತಿಂಗಳುಗಳಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿವೆ.

 ಪದೇ ಪದೇ ಚಿರತೆ ದಾಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಈ ಹಿಂದೆಯೂ ಚಿರತೆ ಕುರಿ, ಆಡು, ನಾಯಿಗಳ ಮೇಲೆ ದಾಳಿ ಮಾಡಿತ್ತು ಎಂದು ಸುರೇಶ್ ಹೇಳಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com