ದುಡಿದ ಕೂಲಿ ಕೊಡುವಂತೆ ಗೊಳಾಟ: ಕನ್ನಡ ವಿವಿ ಗೇಟ್ ಮುಂಭಾಗ ಮಹಿಳಾ ಕಾರ್ಮಿಕರ ಪ್ರತಿಭಟನೆ 

ಫೆಲೋಶಿಪ್ ಕೊಡುವಂತೆ ನಿನ್ನೆ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಇಂದು ದುಡಿದ ಕೂಲಿ ಕೊಡುವಂತೆ ಕಾರ್ಮಿಕರು ವಿವಿಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಗಾರ್ಡನ್ ಮತ್ತು ಕಛೇರಿಗಳ ಕಸ ಗುಡಿಸಿ ಜೀವನ ನಡೆಸುತಿದ್ದ ಬಡ ಕಾರ್ಮಿಕರು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. 
ಮಹಿಳಾ ಕಾರ್ಮಿಕರು
ಮಹಿಳಾ ಕಾರ್ಮಿಕರು

ಹೊಸಪೇಟೆ: ಫೆಲೋಶಿಪ್ ಕೊಡುವಂತೆ ನಿನ್ನೆ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಇಂದು ದುಡಿದ ಕೂಲಿ ಕೊಡುವಂತೆ ಕಾರ್ಮಿಕರು ವಿವಿಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಗಾರ್ಡನ್ ಮತ್ತು ಕಛೇರಿಗಳ ಕಸ ಗುಡಿಸಿ ಜೀವನ ನಡೆಸುತಿದ್ದ ಬಡ ಕಾರ್ಮಿಕರು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. 

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ಮಾಡುತ್ತಿದ್ದ 15 ಜನ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ಕೂಲಿಕೊಡದೆ ಗುತ್ತಿಗೆದಾರ ಪಾಟೀಲ್ ಹೊರಗೆ ತಳ್ಳಿದ್ದಾನೆ. ಹದಿನೈದರಿಂದ ಇಪ್ಪತ್ತು ವರ್ಷಗಳಿಂದ ಕೆಲಸಮಾಡುತ್ತಿರುವ ಈ ಕಾರ್ಮಿಕರಿಗೆ ಪಿ.ಎಪ್.ಇ.ಎಸ್.ಐ. ಸೌಲಭ್ಯ ನೀಡದೆ ದುಡಿಸಿಕೊಳ್ಳಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ಗುತ್ತಿಗೆದಾರ ಪಾಟೀಲ್ ದೌರ್ಜನ್ಯಕ್ಕೆ ಒಳಗಾಗಿ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರಿಂದ ಅವರನ್ನು ಗುತ್ತಿಗೆದಾರ ವಿವಿ ಗೇಟ್ ನಿಂದ ಹೊರಗಡೆ ತಳ್ಳಿದ್ದು, ದೂರನ್ನು  ಮರಳಿ ಪಡೆದರೆ ಕೆಲಸಕ್ಕೆ ಕರೆಸಿಕೊಳ್ಳುವುದಾಗಿ ಗುತ್ತಿಗೆದಾರ ಭಯಪಡಿಸುತ್ತಿದ್ದಾನೆ ಎಂದು ಪ್ರತಿಭಟಟನಾಕಾರರು ಆರೋಪಿಸಿದ್ದಾರೆ.

ಕೌಶಲ್ಯ ಸೆಕ್ವಿರಿಟಿ ಸರ್ವೀಸಸ್ ಎಂಬ ಹೆಸರಿನ ಎಜೆನ್ಸಿಯಿಂದ ಕಾರ್ಮಿಕರಿಗೆ ವಂಚನೆ ಆಗಿದ್ದರೂ  ವಿಶ್ವವಿದ್ಯಾನಿಲಯ ಕಾರ್ಮಿಕರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ಕೊಟ್ಟು ಕೈ ತೊಳೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com