ಕೃಷ್ಣಾ ನದಿ ಪ್ರವಾಹ: ದೀಪಾವಳಿ ಸಂಭ್ರಮಕ್ಕೆ ಕಪ್ಪು ಛಾಯೆ

ಪ್ರವಾಹ ಎಂದರೆ ಎಲ್ಲರ ಎದೆ‌ ಒಂದು ಕ್ಷಣ ಝಲ್ ಎನ್ನುತ್ತದೆ. ಪ್ರವಾಹದ ಕರಾಳ ಮುಗ್ದ ಜನರ‌ ಮೇಲೆ ಭಾರೀ ಪರಿಣಾಮ ಭೀರಿದೆ.
ಪ್ರವಾಹಕ್ಕೆ ತುತ್ತಾಗಿ ಬಿದ್ದ ಮನೆ
ಪ್ರವಾಹಕ್ಕೆ ತುತ್ತಾಗಿ ಬಿದ್ದ ಮನೆ

ರಾಯಬಾಗ/ಚಿಕ್ಕೋಡಿ: ಪ್ರವಾಹ ಎಂದರೆ ಎಲ್ಲರ ಎದೆ‌ ಒಂದು ಕ್ಷಣ ಝಲ್ ಎನ್ನುತ್ತದೆ. ಪ್ರವಾಹದ ಕರಾಳ ಮುಗ್ದ ಜನರ‌ ಮೇಲೆ ಭಾರೀ ಪರಿಣಾಮ ಭೀರಿದೆ. ಇನ್ನೂ ಸಂತ್ರಸ್ಥರಿಗೆ ಸರಕಾರ ಅಲ್ಪ‌ ಸಹಾಯ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರೂ ಫಲಾನುಭವಿಗಳಿಗೆ ಸರಿಯಾಗಿ ತಲುಪದೇ ಇರುವುದರಿಂದ‌ ಕಣ್ಣೀರಲ್ಲಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ದೀಪಾವಳಿಯಂತ್ತೂ ಸಂತ್ರಸ್ಥರ ಬದುಕಿನಲ್ಲಿ ನಿರಾಸೆಯಾಗಿದೆ‌. ಕತ್ತಲೆಯಲ್ಲೇ ಕಾಲ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಹೌದು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ನಲುಗಿದ ಜೀವಗಳು, ಕುಟುಂಬಗಳು ಒಂದಲ್ಲ ಎರಡಲ್ಲ. ಮರ ಮರ ಮುರುಗಿದ ಕುಟುಂಬಗಳು ಕತ್ತಲೆಯಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಪ್ರವಾಹದ ತುತ್ತಾದ ಜನರಿಗೆ ದೀಪಾವಳಿ ಹಬ್ಬ ಈ ವರ್ಷ ಕನಸಿನ‌ ಮಾತಾಗಿದೆ. ಪ್ರವಾಹಕ್ಕೆ ತುತ್ತಾದ ಕುಟುಂಬಗಳಿಗೆ ಸರಕಾರ ಬಿದ್ದ ಮನೆಗಳಿ, ಗೋಡೆಗಳು ಸೀಳಿದ್ದ ಹಾಗೂ ಮನೆಯಲ್ಲಿ ನೀರು ಹೊಕ್ಕಿರುವ ಮನೆಗಳಿಗೆ ಎಬಿಸಿ ಕೆಟಗೇರಿ ಎಂದು ಮಾಡಿ ನಿಜವಾದ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸರಕಾರ ಸೂಚಿಸಿತ್ತು. ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಜವಾದ ಸಂತ್ರಸ್ಥರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇನ್ನೂ ದೀಪಾವಳಿ ಹಬ್ಬದ ಈ ವರ್ಷ ನಮಗೆ ಹೇಗೆ‌ ಆಚರಿಸಿಕೊಳ್ಳುವುದು, ಪರಿಸ್ಥಿತಿ ಬಹಳ ಕೆಟ್ಟಿದೆ.‌ ಸರಕಾರಿ‌ ಸೌಲಭ್ಯವೂ ಸಿಕ್ಕಿಲ್ಲ. ಈ ಸಲ‌ ದೀಪಾವಳಿ ದುಃಖದಲ್ಲಿ ಆಚರಿಸುವ ಪರಿಸ್ಥಿತಿ ಬಂದಿದೆ ಎಂದು ದುಃಖದಲ್ಲಿ‌‌ ತಮ್ಮ ಅಳಲನ್ನು ಪುಷ್ಪಾ ಉದಯ ಪಾಟೀಲ ತೋಡಿಕೊಂಡರು..

ಇನ್ನೂ ಚಿಕ್ಕೋಡಿ ತಾಲೂಕಿನ‌ ಮಾಂಜರಿ ಗ್ರಾಮದಲ್ಲಿ‌‌ ಅಧಿಕಾರಿಗಳ‌ ನಿರ್ಲಕ್ಷ್ಯದಿಂದ ಅರ್ ಫಲಾನುಭವಿಗಳಿಗೆ ಎ ಬಿ ಕೆಟಗೇರಿ ಯಲ್ಲಿ ಸೇರ್ಪಡೆ ಮಾಡುವುದರ ಬದಲಿಗೆ ಸಿ ಕೆಟಗೇರಿಯಲ್ಲಿ ಸೇರ್ಪಡೆ ಮಾಡಿರುವುದು ಹಾಗೂ ಎಬಿಸಿ ಕೆಟಗೇರಿ ಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ. ಇದರಿಂದ ಈ ಹಿಂದೆ ಫಲಾನುಭವಿಗಳು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರೂ ಯಾರೂ ಕ್ಯಾರೇ ಎಂದಿಲ್ಲ. ಇದರಿಂದ ಜನರು ಪರದಾಡು ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಬೇರೆ ಕಡೆ ಬಾಡಿಗೆ ಮನೆ ಮಾಡಬೇಕೆಂದರೂ ಬಾಡಿಗೆ ಮನೆ ಸಿಕ್ಕಿಲ್ಲ. ಮುರಿದುಕೊಂಡ ಮನೆಯಲ್ಲಿಯೇ ವಾಸ ಮಾಡುತ್ತಿರೆ. ಈಗ ಮುರಿದು ಬೀಳುತ್ತೋ ಆಗ ಬೀಳುತ್ತೋ ಎಂದು ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ಬದುಕು ಕಟ್ಟಿಕೊಳ್ಳುವದರಲ್ಲಿ ದೀಪಾವಳಿ ಹಬ್ಬವಂತ್ತು ಕಣಣ್ಣೀರ ಹಬ್ಬವಾಗಿದೆ. ಕೃಷ್ಣಾ ನದಿ ಪ್ರವಾಹ ಈ ಭಾಗದ ಜನರಿಗೆ ಭಾರೀ ಶಾಖ್ ನೀಡಿದೆ. ಇನ್ನೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ‌ ಅರ್ಹ ಫಲಾನುಭವಿಗಳಿಗೆ ಸಿಗದ ಸೌಲಭ್ಯ ಸಂತ್ರಸ್ಥರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಇನ್ನಾದರೂ ಅಧಿಕಾರಿ ಎಚ್ಚೆತ್ತು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕೊಡಿಸಬೇಕಿದೆ. ಅಲ್ಲದೇ ಸಂತ್ರಸ್ಥರ ಬದುಕು ಅತಂತ್ರವಾಗಿ ಈ ವರ್ಷದ ದೀಪಾವಳಿ ಕತ್ತಲೆಯ ದೀಪಾವಳಿಯಾಗಿದೆ.

ವರದಿ: ರವೀಂದ್ರ ಚೌಗಲೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com