ಮಾಜಿ ಪತಿ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣ: ಮಹಿಳೆ ರೂ.25,000 ದಂಡ 

ಮಾಜಿ ಪತಿ ವಿರುದ್ಧ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮೈಸೂರು ಮೂಲದ ಮಹಿಳೆಯೊಬ್ಬರಿಗೆ ಹೈಕೋರ್ಟ್ ರೂ.25,000 ದಂಡ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಜಿ ಪತಿ ವಿರುದ್ಧ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮೈಸೂರು ಮೂಲದ ಮಹಿಳೆಯೊಬ್ಬರಿಗೆ ಹೈಕೋರ್ಟ್ ರೂ.25,000 ದಂಡ ವಿಧಿಸಿದೆ.
 
ಮೈಸೂರಿನ ಲಷ್ಕರ್ ಮೊಹಲ್ಲಾ ನಿವಾಸಿಯಾಗಿರುವ ನಾಜಿಯಾ ಆಸ್ಮಾ ಎಂಬ ಮಹಿಳೆಗೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ರೂ. 25,000 ದಂಡ ವಿಧಿಸಿದ್ದಾರೆ. 

ದೂರಿನಲ್ಲಿ ಸಂಪೂರ್ಣವಾಗಿ ನಂಬಲಾಗದ ಹಾಗೂ ಭಿನ್ನ ಆರೋಪಗಳು ಕಂಡು ಬಂದಿದೆ. ದೂರಿಲ್ಲಿರುವ ಎಲ್ಲಾ ಆರೋಪಗಳೂ ಸರಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ. 

2008ರಲ್ಲಿ ನಾಜಿಯಾ ಫೈಸಲ್ ಅಹಮದ್ ಖಾನ್ ನೊಂದಿಗೆ ವಿವಾಹವಾಗಿದ್ದರು. ಖಾನ್ ಅವರು ಕುವೈತ್ ನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದರು. ವಿದೇಶಕ್ಕೆ ತೆರಳಲು ನಾಜಿಯಾ ವಿರೋಧ ವ್ಯಕ್ತಪಡಿಸಿದ ಕಾರಣ ಖಾನ್ ಮೈಸೂರಿನಲ್ಲಿಯೇ ನೆಲೆಯೂರಿದ್ದರು. 

2011ರಲ್ಲಿ ಸಹೋದರಿಯ ನಿಶ್ಚಿತಾರ್ಥ ಹಿನ್ನಲೆಯಲ್ಲಿ ನಾಜಿಯಾ ತವರು ಮನೆಗೆ ತೆರಳಿದ್ದರು. ನಿಶ್ಚಿತಾರ್ಥ ಮುಗಿದರೂ ಹಿಂತಿರುಗಿ ಬಂದಿರಲಿಲ್ಲ. ಬಳಿಕ ಬಹ್ರೇನ್ ನಲ್ಲಿ ಉದ್ಯೋಗ ದೊರಕಿತ್ತು ಅಲ್ಲಿಗೂ ಹೋಗಲು ನಾಜಿಯಾ ನಿರಾಕರಿಸಿದ ಹಿನ್ನಲೆಯಲ್ಲಿ ಖಾನ್ ಒಬ್ಬರೇ ಬಹ್ರೇನ್'ಗೆ ತೆರಳಿದ್ದರು. ಗಂಡ ಬಹ್ರೇನ್'ಗೆ ತೆರಳಿದ 2 ತಿಂಗಳ ಬಳಿಕ ನಾಜಿಯಾ ಪೊಲೀಸ್ ಠಾಣೆಯಲ್ಲಿ ಗಂಡ ಮತ್ತು ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಿದ್ದಳು. ಕೋರ್ಟ್ ವಿಚಾರಣೆ ಶುರುವಾದಾಗ 2003ರಲ್ಲೇ ಆಕೆಗೆ ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ನನ್ನ ಜೊತೆ ವಿವಾಗ ಆಗಿರುವುದಾಗಿ ಪತಿ ನ್ಯಾಯಾಲಯದ ಗಮನಕ್ಕೆ ತಂದಿದ್ದ. ಅಲ್ಲದೆ, ವಿವಾರ ಮರುಸ್ಥಾಪನೆ ಕೋರಿ ಮೊದಲ ಗಂಡ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಸಂಬಂಧ ಮರು ಮದುವೆಯಾಗದಂತೆ 2006ರಲ್ಲಿ ಮಧ್ಯಂತರ ಆದೇಶ ನೀಡಿದ್ದರೂ ವಿಚಾರ ಮುಚ್ಚಿಟ್ಟು ನನ್ನನ್ನು ಮದುವೆಯಾಗಿದ್ದಾಳೆ ಎಂದು ಆರೋಪಿಸಿದ್ದ. ಇದನ್ನು ಪ್ರಶ್ನಿಸಿದ್ದಕೆ ದೂರು ದಾಖಲಿಸಿದ್ದಾಳೆಂದು ಹೇಳಿದ್ದರು. 

2ನೇ ಪತಿ ವಿರುದ್ಧ ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು 2016 ಡಿ.5ಪಂದು ಮೈಸೂರಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆಕೆಗೆ ದಂಡವನ್ನೂ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸೆಷನ್ಸ್ ನ್ಯಾಯಾಲಯ ಮತ್ತೆ ದಂಡ ವಿಧಿಸಿತ್ತು. ಇದೇ ವೇಳೆ ಸೆಷನ್ಸ್ ಕೋರ್ಟ್'ನಲ್ಲಿ ಹಾಕಿದ್ದ ವರದಕ್ಷಿಣ ಕಿರುಕುಳ ಆರೋಪ ಕೈಬಿಡುವಂತೆ 2ನೇ ಪತಿ ಸಲ್ಲಿಸಿದ್ದ ಅರ್ಜಿಯನ್ನು 2018ರಲ್ಲಿ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ ಮೆಟ್ಟಿಲೇರಿದ್ದ. ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ಪ್ರಕರಣ ರದ್ದು ಪಡಿಸಿದೆ. ಅಲ್ಲದೆ, ಮಹಿಳೆಗೆ ದಂಡ ವಿಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com