ದೀಪಾವಳಿ ಪೂಜೆಗೆ ಬೆಣ್ಣೆಹಳ್ಳದಲ್ಲಿ ಇಳಿದಿದ್ದ ಇಬ್ಬರು ನೀರುಪಾಲು

ಬೆಣ್ಣೆ ಹಳ್ಳಕ್ಕೆ ದೀಪಾವಳಿ ದಿನ ಪೂಜೆ ಸಲ್ಲಿಸಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಅಪಾಯದಲ್ಲಿ ಸಿಲುಕಿರುವ ಘಟನೆ ರೋಣ ತಾಲೂಕಿನ ಮಳವಾಡ ಗ್ರಾಮದ ಲ್ಲಿ ನಡೆದಿದೆ.
 

Published: 27th October 2019 04:43 PM  |   Last Updated: 27th October 2019 04:43 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ಬೆಣ್ಣೆ ಹಳ್ಳಕ್ಕೆ ದೀಪಾವಳಿ ದಿನ ಪೂಜೆ ಸಲ್ಲಿಸಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಅಪಾಯದಲ್ಲಿ ಸಿಲುಕಿರುವ ಘಟನೆ ರೋಣ ತಾಲೂಕಿನ ಮಳವಾಡ ಗ್ರಾಮದ ಲ್ಲಿ ನಡೆದಿದೆ.

ಮೆಣಸಗಿ ಗ್ರಾಮದ ಸಮೀಪ  ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕಲಕಪ್ಪ ವಿಟ್ಟಣ್ಣನವರ್ ಹಾಗೂ ಈರಣ್ಣ ವಿಟ್ಟಣ್ಣನವರ್ ಪೂಜೆ ಸಲ್ಲಿಸಲು ಹೋಗಿದ್ದಾಗ ಅವರು ಹಳ್ಳದಲ್ಲಿ ಮುಳುಗಿದ್ದಾರೆ.

ಸುದ್ದಿ ತಿಳಿದ ಎನ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಧಾವಿಸಿದ್ದು ಇಬ್ಬರೂ ವ್ಯಕ್ತಿಗಳ ಶೋಧಕಾರ್ಯ ನಡೆಸಿದೆ.ಗ್ರಾಮಸ್ಥರ ಮಾಹಿತಿಯಂತೆ ಇಬ್ಬರೂ ಕುರುಬರಾಗಿದ್ದು ಅವರು ಶನಿವಾರ ಸಂಜೆ ದೀಪಾವಳಿ ಪೂಜೆ ನಡೆಸಲು ನೀರಿಗೆ ಇಳಿದಿದ್ದಾರೆ. ಆದರೆ ನೀರಿನ ಪ್ರವಾಹ ಹೆಚ್ಚಿದ್ದ ಕಾರಣ ಅವರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp