ಆರ್ ಸಿಇಪಿಗೆ ಸಹಿ ಹಾಕಬೇಡಿ, ಕೇಂದ್ರಕ್ಕೆ ಕರ್ನಾಟಕದ ರೈತರ ಮನವಿ 

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಆರ್‌ಸಿಇಪಿ) ಸಹಿ ಹಾಕದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕದ ರೈತರು ಅ.31 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. 
ಆರ್ ಸಿಇಪಿಗೆ ಸಹಿ ಹಾಕಬೇಡಿ, ಕೇಂದ್ರಕ್ಕೆ ಕರ್ನಾಟಕದ ರೈತರ ಮನವಿ
ಆರ್ ಸಿಇಪಿಗೆ ಸಹಿ ಹಾಕಬೇಡಿ, ಕೇಂದ್ರಕ್ಕೆ ಕರ್ನಾಟಕದ ರೈತರ ಮನವಿ

ಬೆಂಗಳೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಆರ್‌ಸಿಇಪಿ) ಸಹಿ ಹಾಕದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕದ ರೈತರು ಅ.31 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. 

ಆರ್ ಸಿಇಪಿ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಲಿದ್ದು, ಆರ್ ಸಿಇಪಿಗೆ ಸಹಿಹಾಕುವುದನ್ನು ವಿರೋಧಿಸಿ ಜಿಲ್ಲಾ ಕೇಂದ್ರಗಳಲ್ಲಿ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. 

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳಿಗೆ ಆಮದು ಸುಂಕ  ಶೂನ್ಯವಾಗಲಿದೆ. ಇದರಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ತುಂಬುವುದಕ್ಕೆ ನೋಡುತ್ತಿರುವ ರಾಷ್ಟ್ರಗಳಿಗಷ್ಟೇ ಸಹಕಾರಿಯಾಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. 

ಕೋಟ್ಯಂತರ ರೈತರು ಪ್ರಮುಖವಾಗಿ ಮಹಿಳಾ ಕೃಷಿಕರು ಡೈರಿ ಫಾರ್ಮಿಂಗ್ ನ್ನು ನಂಬಿ ಬದುಕುತ್ತಿದ್ದಾರೆ, ಆರ್ ಸಿಇಪಿ ಸಹಿ ಮಾಡುವುದರಿಂದ ಇದಕ್ಕೂ ಕುತ್ತು ಬರಲಿದೆ ಎಂದು ಚಂದ್ರಶೇಖರ್ ಕೋಡಿಹಳ್ಳಿ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com