ಮಂಡ್ಯ: ಕೆ.ಆರ್. ಪೇಟೆ ಬಳಿ ಪಿಎಫ್ ಐ ಪರೇಡ್,  16 ಮಂದಿ ವಶಕ್ಕೆ

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ನಲ್ಲಿ ಇಂದು ಪಿಎಫ್ ಐ ಸಂಘಟನೆ ಪರೇಡ್ ನಡೆಸಿದೆ. 

Published: 28th October 2019 12:33 PM  |   Last Updated: 28th October 2019 12:44 PM   |  A+A-


Casualphoto1

ಸಾಂದರ್ಭಿಕ ಚಿತ್ರ

Posted By : Nagaraja AB
Source : RC Network

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ನಲ್ಲಿ ಇಂದು ಪಿಎಫ್ ಐ ಸಂಘಟನೆ ಪರೇಡ್ ನಡೆಸಿದೆ. 

ಈ ಮಾಹಿತಿ ಕಲೆ ಹಾಕಿದ ಪೊಲೀಸರು  ಕಾರ್ಯಾಚರಣೆ ನಡೆಸಿದ್ದು,  ಶಂಕಿತ 16 ಮಂದಿ ಪಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ಪಿ ಪರಶುರಾಮ್, ಎಎಸ್ಪಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. 

ಹುಣಸೂರಿನ ನಲ್ಲಿ 3, ಆಲಂಬಾಡಿಕಾವಲ್ ನ 5, ಕೆ.ಆರ್.ಪೇಟೆ ಪಟ್ಟಣದ 8 ಮಂದಿ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. 

ಕೆ. ಆರ್. ಪೇಟೆ ಪಟ್ಟಣದ ಶಫೀವುಲ್ಲಾ ಕಿಕ್ಕೇರಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಮತ್ತು ಪಿಎಫ್ ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬುದು ತಿಳಿದುಬಂದಿದೆ.

ವರದಿ: ನಾಗಯ್ಯ
 

Stay up to date on all the latest ರಾಜ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp