ಕಳ್ಳತನ ಪ್ರಕರಣ; ವಿಚಾರಣೆಗೆ ಹೆದರಿ ದೂರುದಾರನೇ ಆತ್ಮಹತ್ಯೆ

ಖಾಸಗಿ ಕಂಪನಿಯೊಂದರಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುವೆಂಪುನಗರದ ಠಾಣಾ ವ್ಯಾಪ್ತಿಯ ಮಧುವನದಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಖಾಸಗಿ ಕಂಪನಿಯೊಂದರಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುವೆಂಪುನಗರದ ಠಾಣಾ ವ್ಯಾಪ್ತಿಯ ಮಧುವನದಲ್ಲಿ ನಡೆದಿದೆ. 
  
ಹರೀಶ್ ಕುಮಾರ್ (42) ಮೃತ ಉದ್ಯೋಗಿ. ಇವರು ಖಾಸಗಿ  ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆಷ್ಟೇ ಫ್ಯಾಕ್ಟರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿಗಳು ಕಳ್ಳತನವಾಗಿದ್ದು,  ಈ ಬಗ್ಗೆ ಸ್ವತಃ ಹರೀಶ್  ಅವರೇ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 
  
ಈಗ ಹಠಾತ್ ಬೆಳವಣಿಗೆಯಲ್ಲಿ ಹರೀಶ್ ದೇಹ ನೇಣು ಬಿಗಿದಿರುವ ರೀತಿಯಲ್ಲಿ ಪತ್ತೆಯಾಗಿದೆ. ​ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದು ಕುಟುಂಬಸ್ಥರು  ಆರೋಪಿಸಿದ್ದಾರೆ. ಅಲ್ಲದೇ, ಕಂಪನಿಯಲ್ಲಿ ಕಿರುಕುಳ ನೀಡುತ್ತಿರುವುದಾಗಿ ಹರೀಶ್,  ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ‌‌ ನೀಡಿದ್ದಾರೆ.
  
 ಸದ್ಯ  ಕುವೆಂಪು ನಗರ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡೈರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ,  ಕಳ್ಳತನಕ್ಕೂ ಹರೀಶ್ ಕುಮಾರ್ ​​ಅವರಿಗೂ ಸಂಬಂಧವಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com