ತಗ್ಗಿಲ್ಲ 'ಕ್ಯಾರ್' ಅಬ್ಬರ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ

ಭಾರತದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದ ಕ್ಯಾರ್ ಚಂಡಮಾರುತ ಇದೀಗ ಗಲ್ಫ್ ನತ್ತ ಮುಖ ಮಾಡಿದ್ದು, ಆದರೂ ಕರ್ನಾಟಕ, ತಮಿಳುನಾಡು, ರಾಯಲಸೀಮಾ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದ ಕ್ಯಾರ್ ಚಂಡಮಾರುತ ಇದೀಗ ಗಲ್ಫ್ ನತ್ತ ಮುಖ ಮಾಡಿದ್ದು, ಆದರೂ ಕರ್ನಾಟಕ, ತಮಿಳುನಾಡು, ರಾಯಲಸೀಮಾ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆ, ಪ್ರಸ್ತುತ ಕ್ಯಾರ್ ಚಂಡಮಾರುತ ಗಲ್ಫ್ ನತ್ತ ಮುಖ ಮಾಡಿದ್ದು, ಮುಂಬೈ ಕರಾವಳಿ ದೂರದಿಂದ 980 ಕಿ.ಮೀ ದೂರದಲ್ಲಿ ಮತ್ತು ಒಮನ್ ನ ಪೂರ್ವ-ಈಶಾನ್ಯ ಸಲಾಲಾದಿಂದ 1020 ಕಿ.ಮೀ ದೂರದಲ್ಲಿದೆ.

ಇನ್ನು ಕ್ಯಾರ್ ಚಂಡಮಾರುತ ಭಾರತದ ಕರಾವಳಿಯಿಂದ ದೂರ ತೆರಳುತ್ತಿದೆಯಾದರೂ ಅದರ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ. ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಹೇ ಮತ್ತು ಲಕ್ಷದ್ವೀಪದಲ್ಲಿ ಭಾರಿ ಮಳೆಯಾಗಲಿದ್ದು, ದಕ್ಷಿಣ ಕರ್ನಾಟಕದ ಒಳನಾಡಿನಲ್ಲೂ ಭಾರಿ ಮಳೆಯಾಗಲಿದೆ ಎಂದು ಹೇಳಿದೆ. ಅಲ್ಲದೆ ಅಕ್ಟೋಬರ್ 31ರ ಬಳಿಕ ಚಂಡಮಾರುತದ ಅಬ್ಬರ ಭಾರತದಲ್ಲಿ ಕಡಿಮೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com