ನಿವೃತ್ತಿಯಂಚಿನಲ್ಲಿ 'ಕಾಡುಗಳ್ಳರ ಹಂಟರ್' ಬಂಡೀಪುರದ ರಾಣಾ!

ಯಾವುದೇ ಡಿಸ್ಟರ್ಬೆನ್ಸ್ ಇಲ್ಲಾಂದ್ರೆ 30-40 ಕಿ.ಮೀ. ದೂರದವರೆಗೂ ವಾಸನೆ ಮೂಲಕವೇ ಕಳ್ಳರನ್ನು ಹಿಡಿಯುತ್ತಿದ್ದ ರಾಣಾನಿಗೆ ವಯಸ್ಸಾಗುತ್ತಿರುವುದರಿಂದ ಕೆಲವೇ ತಿಂಗಳುಗಳಲ್ಲಿ ರಾಣಾ ನಿವೃತ್ತಿಯಾಗಲಿದ್ದಾನೆ.
ನಿವೃತ್ತಿಯಂಚಿನಲ್ಲಿ 'ಕಾಡುಗಳ್ಳರ ಹಂಟರ್' ಬಂಡೀಪುರದ ರಾಣಾ!
ನಿವೃತ್ತಿಯಂಚಿನಲ್ಲಿ 'ಕಾಡುಗಳ್ಳರ ಹಂಟರ್' ಬಂಡೀಪುರದ ರಾಣಾ!

ಬಂಡೀಪುರ ಅರಣ್ಯ ಪ್ರದೇಶದಲ್ಲಿ‌ ತೇಗ, ಹೊನ್ನೆಯಂತಹ ಸಂಪದ್ಭರಿತ ಮರಗಳಿದ್ದು ಇವುಗಳ ಮೇಲೆ ಯಾವಾಗಲೂ ಇರುತ್ತಿದ್ದ ಮರಗಳ್ಳರ ಕಣ್ಣು ಈಗ ಪೊಲೀಸ್​ ನಾಯಿ ರಾಣಾನಿಂದ ತಪ್ಪಿದೆ ಎನ್ನಬಹುದು. ಯಾವುದೇ ಡಿಸ್ಟರ್ಬೆನ್ಸ್ ಇಲ್ಲಾಂದ್ರೆ 30-40 ಕಿ.ಮೀ. ದೂರದವರೆಗೂ ವಾಸನೆ ಮೂಲಕವೇ ಕಳ್ಳರನ್ನು ಹಿಡಿಯುತ್ತಿದ್ದ ರಾಣಾನಿಗೆ ವಯಸ್ಸಾಗುತ್ತಿರುವುದರಿಂದ ಕೆಲವೇ ತಿಂಗಳುಗಳಲ್ಲಿ ರಾಣಾ ನಿವೃತ್ತಿಯಾಗಲಿದ್ದಾನೆ.

ಚಾಮರಾಜನಗರ: ಕ್ಷಣಾರ್ಧದಲ್ಲಿ ಕಾಡುಗಳ್ಳರನ್ನು, ನಾಡಿಗೆ ಬಂದ ವನ್ಯಜೀವಿಗಳ ಇರುವಿಕೆಯನ್ನು ಪತ್ತೆಹಚ್ಚುತ್ತಿದ್ದ ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ಸ್ಪೆಷಲ್ ಇನ್ವೆಸ್ಟಿಗೇಟರ್ ರಾಣಾ ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದಾನೆ.ಪೊಲೀಸ್​​ ಶ್ವಾನ ರಾಣಾನಿಗೆ 8 ವರ್ಷವಾಗುತ್ತಿದೆ. ರಾಣಾನ ಸೂಕ್ಷ್ಮ ವಾಸನಾಗ್ರಹಿಗಳು ಕುಂದದಿದ್ದರೂ ವಯೋಮಾನಕ್ಕುಗುಣವಾಗಿ ನಿವೃತ್ತಿಯಂಚಿಗೆ ಬಂದು ನಿಂತಿದ್ದಾನೆ. ಬಂಡೀಪುರದ ಮುಕುಟಮಣಿಯಾಗಿದ್ದ ಪ್ರಿನ್ಸ್ ಹುಲಿಯಂತೆ ರಾಣಾ ಕೂಡ ತನ್ನ ಸಾಹಸಕಾರ್ಯದಿಂದ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದು ಅವನ‌ ಅಭಿಮಾನಿಗಳಿಗೆ ಈ ನಿವೃತ್ತಿಯ ಸುದ್ದಿ ನಿಜಕ್ಕೂ ಬೇಸರ ತರಿಸಬಹುದು. ಈ ಬಗ್ಗೆ ಬಂಡೀಪುರ ಸಿಎಫ್ಒ ಬಾಲಚಂದ್ರ ಮತ್ತು ರಾಣಾನನ್ನು ನೋಡಿಕೊಳ್ಳುತ್ತಿರುವ ಕಾಳ  ತಿಳಿಸಿದ್ದಾರೆ.

ರಾಣಾ ಜರ್ಮನ್ ಶಫರ್ಡ್ ಜಾತಿಯ ಶ್ವಾನವಾಗಿದ್ದು, 9 ತಿಂಗಳು ಮಧ್ಯಪ್ರದೇಶದಲ್ಲಿ 11 ತಿಂಗಳು ತರಬೇತಿ ಪಡೆದಿತ್ತು. ಪ್ರಕಾಶ್ ಎಂಬವರು ಈ ರಾಣಾನನ್ನು ನೋಡಿಕೊಳ್ಳುತ್ತಿದ್ದರು. ಈಗ ಕಾಳ ಎಂಬವರು ಶ್ವಾನದ ಮೇಂಟರ್ ಆಗಿದ್ದು, ಇವರನ್ನು ಬಿಟ್ಟು ಬೇರಿನ್ಯಾರ ಮಾತನ್ನು ರಾಣಾ ಕೇಳಲ್ಲ, ಬೇರೆಯವರು ನೀಡಿದ ತಿ‌ನಿಸನ್ನು ತಿನ್ನಲ್ಲ ಈ ಸೂಪರ್ ಡಾಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com