ಗಣೇಶೋತ್ಸವ: ಪಿಒಪಿ ಗಣೇಶನ ವಿರುದ್ಧ ಹೋರಾಟ: ಭಾರಿ ಸಮರದಲ್ಲಿ ಗೆದ್ದ ಪುಟ್ಟ ಗ್ರಾಮ 

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ವಿರುದ್ಧ ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದ ಕೊಪ್ಪಳದಲ್ಲಿರುವ ಈ ಸಣ್ಣ ಗ್ರಾಮವೊಂದು ಕೊನೆಗೂ ತನ್ನ ಹೋರಾಟದಲ್ಲಿ ಗೆದ್ದಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಪ್ಪಳ: ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ವಿರುದ್ಧ ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದ ಕೊಪ್ಪಳದಲ್ಲಿರುವ ಈ ಸಣ್ಣ ಗ್ರಾಮವೊಂದು ಕೊನೆಗೂ ತನ್ನ ಹೋರಾಟದಲ್ಲಿ ಗೆದ್ದಿದೆ. 


8,000 ಜನಸಂಖ್ಯೆಯನ್ನು ಹೊಂದಿರುವ ಕೊಪ್ಪಳದ ಬೆಟಗೇರಿ ಗ್ರಾಮ ಹಲವು ವರ್ಷಗಳಿಂದಲೂ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಯನ್ನು ತಯಾರಿಸಿ ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ. ಇದೀಗ ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಲಾಗಿತ್ತು. ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದ ಈ ಗ್ರಾಮಕ್ಕೆ ಗೆಲವು ಸಿಕ್ಕಿದಂತಾಗಿದೆ. 


ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ವಿನಾಯಕ್ ಬಡಿಗೇರ್ ಎಂಬುವವರು ಹಲವು ವರ್ಷಗಳ ಹಿಂದಿನಿಂದಲೂ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಸ್ಥಾಪಿಸುತ್ತಾ ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. 


ಪಿಒಪಿ ಗಣೇಶ ಮೂರ್ತಿಗಳಿಗೆ ಅಧಿಕಾರಿಗಳು ಎಷ್ಟೇ ಕಡಿವಾಣ ಹಾಕಿದರೂ ಕೊಪ್ಪಳದಲ್ಲಿ ಇಂತಹ ಮೂರ್ತಿಗಳು ರಾರಾಜಿಸುತ್ತಿದೆ. ಆದರೆ, ಕೊಪ್ಪಳದ ಈ ಗ್ರಾಮಕ್ಕೆ ಭೇಟಿ ನೀಡಿದರೆ ಮಣ್ಣಿನಲ್ಲಿ ತಯಾರಿಸಿದ ಸುಂದರವಾದ ಪರಿಸರ ಸ್ನೇಹಿ ಗಣಪತಿಗಳನ್ನು ಕಾಣಬಹುದು. ವಿನಾಯಕ್ ಬಡಿಗೇರ್ ಅವರ ಪರಿಶ್ರಮದಿಂದ ಸುಂದರವಾದ ಮಣ್ಣಿನ ಗಣಪತಿಗಳು ಕಟಾರಕಿ, ಮುತ್ತೂರ್, ತಿಗಾರಿ, ನೀರಲಗಿ, ಅಲ್ವಾಂಡಡಿ, ಮೊರನಾಲ್, ಹನಕುಂಟಿ ಮತ್ತು ಇತರೆ ಗ್ರಾಮಗಳ ಸೌಂದರ್ಯ ಹೆಚ್ಚಾಗುವಂತೆ ಮಾಡಿದೆ. 


ತಮ್ಮ ಪರಿಶ್ರಮ ಹಾಗೂ ಪರಿಶ್ರಮಕ್ಕೆ ಸಿಕ್ಕಿರುವ ಫಲದ ಕುರಿತು ಪ್ರತಿಕ್ರಿಯೆ ನೀಡಿರುವ ವಿನಾಯಕ್ ಬಡಿಗೇರ್ ಅವರು, ತಂದೆ ನಿಂಗಪ್ಪ ಬಡಿಗೇರ್ ಅವರಿಂದ ಗಣೇಶ ಮೂರ್ತಿಗಳನ್ನು ಮಾಡುವುದನ್ನು ಕಲಿತಿದ್ದೆ. ಇದೀಗ ಮಣ್ಣಿನ ಗಣಪತಿಗಳಿಗೆ ಬೇಡಿಕೆಗಳು ಹೆಚ್ಚಾಗಿವೆ. ಹಬ್ಬಕ್ಕೂ ಹಲವು ತಿಂಗಳು ಮುಂಚಿನಿಂದಲೇ ಮೂರ್ತಿಗಳಿಗೆ ಬೇಡಿಕೆಗಳು ಬಂದಿವೆ ಎಂದು ಹೇಳಿದ್ದಾರೆ. 


ವಿನಾಯಕ್ ಅವರ ತಂದೆ ನಿಂಗಪ್ಪ ಅವರು 6 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಈ ಭೂಮಿಯನ್ನು ತಮ್ಮ ಮೂವರು ಮಕ್ಕಳಿಗೆ ಹಂಚಿಗೆ ಮಾಡಿದ್ದಾರೆ. 2 ಎಕರೆ ಭೂಮಿಯಿಂದ ಜೀವನ ನಡೆಸುವುದು ಕಷ್ಟವಾದ ಬಳಿಕ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ನನ್ನ ತಂದೆ ಹೇಳಿಕೊಟ್ಟರು. ಇದೀಗ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚಿದೆ. ರೂ.250 ರಿಂದ ರೂ.1000ದ ವರೆಗೂ ಆಕರ್ಷಕ ಬೆಲೆಯಲ್ಲಿ ಒಟ್ಟು 50 ಮೂರ್ತಿಗಳನ್ನು ಮಾರಾಟ ಮಾಡಿದ್ದೇನೆ. ಗ್ರಾಮದ ಭಜನಾ ಮಂಡಳಿ ದೊಡ್ಡ ಮೂರ್ತಿ ತಯಾರಿಸಲು ತಿಳಿಸಿದೆ. ಮೂರ್ತಿಯ ಬೆಲೆಯನ್ನು ಮಂಡಳಿಯೇ ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ದಾರೆ. 


ಮಣ್ಣಿನ ಗಣಪತಿಗಳು ಪರಿಸರ ಸ್ನೇಹಿಯಾಗಿದೆ. ಕಳೆದ 8-10 ವರ್ಷಗಳಿಂದ ಮಣ್ಣಿನ ಗಣಪತಿಗಳನ್ನೇ ಖರೀದಿಸುತ್ತಿದ್ದೇವೆಂದು ಮೊರಾನಾಳ್ ಗ್ರಾಮದ ಗ್ರಾಹಕ ಶಂಭುಲಿಂಗಯ್ಯ ಎಂಬುವವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com