ಮಂಗಳೂರು: ಆಟೋ ರಿಕ್ಷಾದಲ್ಲಿ ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನ

ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪ್ರಾಪ್ತೆಗೆ  ಲೈಂಗಿಕ ಕಿರುಕುಳ ನೀಡಿದ ಘಟನೆ ಪುತ್ತೂರು  ತಾಲೂಕಿನ ಕೆಮ್ಮಾಯಿ ಪರಿಸರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪ್ರಾಪ್ತೆಗೆ  ಲೈಂಗಿಕ ಕಿರುಕುಳ ನೀಡಿದ ಘಟನೆ ಪುತ್ತೂರು  ತಾಲೂಕಿನ ಕೆಮ್ಮಾಯಿ ಪರಿಸರದಲ್ಲಿ ನಡೆದಿದೆ.

ಘಟನೆಯ ಬಳಿಕ ಸ್ಥಳದಲ್ಲಿ  ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥತಿಯನ್ನು ತಿಳಿಸಿದ್ದಾರೆ.

ತಂದೆಯ ಆಟೋ ರಿಕ್ಷಾದಲ್ಲಿ ಅಪ್ರಾಪ್ತೆಯೊಬ್ಬಳು ಕೆಮ್ಮಾಯಿಯಿಂದ ಪುತ್ತೂರು ಪೇಟೆ ಕಡೆ ಬರುತ್ತಿದ್ದ ವೇಳೆ ಅದೇ ಆಟೋ ರಿಕ್ಷಾಕ್ಕೆ ಮಾರ್ಗಮಧ್ಯೆ ಹತ್ತಿದ್ದ ವ್ಯಕ್ತಿಯೊಬ್ಬರು ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ.

ಈ ಕುರಿತು ಅಪ್ರಾಪ್ತೆ ಆಟೋ ಚಲಾಯಿಸುತ್ತಿದ್ದ ತನ್ನ ತಂದೆಗೆ ತಿಳಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ರಿಕ್ಷಾವನ್ನು ನಿಲ್ಲಿಸಿದಾಗ ವ್ಯಕ್ತಿ ಆಟೋ ರಿಕ್ಷಾದಿಂದ ಪರಾರಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com