ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ: ಕಾರ್ಯಾಚರಣೆ ತೀವ್ರ

ನಗರದ ಹಳೇಗುಡ್ಡದ ಹಳ್ಳಿಯಲ್ಲಿ ಮನೆಯ ಪಕ್ಕದ ಬಾಲಕಿಯೊಂದಿಗೆ ಕಸ ಚೆಲ್ಲಲ್ಲು ತೆರಳಿದ್ದ ಬಾಲಕನೋರ್ವ ರಾಜಕಾಲುವೆಗೆ ಆಯ ತಪ್ಪಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಹಳೇಗುಡ್ಡದ ಹಳ್ಳಿಯಲ್ಲಿ ಮನೆಯ ಪಕ್ಕದ ಬಾಲಕಿಯೊಂದಿಗೆ ಕಸ ಚೆಲ್ಲಲ್ಲು ತೆರಳಿದ್ದ ಬಾಲಕನೋರ್ವ ರಾಜಕಾಲುವೆಗೆ ಆಯ ತಪ್ಪಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರ ಮುಹಮ್ಮದ್ ಝೈನ್ (5) ಪಕ್ಕದ ಮನೆಯ ಬಾಲಕಿಯೊಂದಿಗೆ ಕಸ ಚೆಲ್ಲಲ್ಲು ತೆರಳಿದ್ದ. ಆಯ ತಪ್ಪಿ ಆತ ರಾಜ ಕಾಲುವೆಯಲ್ಲಿ ಬಿದ್ದಿದ್ದರಿಂದ ಗಾಬರಿಗೊಂಡ ಬಾಲಕಿ ವಿಷಯವನ್ನು ಕಳೆದೆರಳು ದಿನಗಳಿಂದ ಯಾರಿಗೂ ತಿಳಿಸಿರಲಿಲ್ಲ. ಬಾಲಕ ಎಲ್ಲಿಯೂ ಕಾಣದಿರುವುದರಿಂದ ಗಾಬರಿಗೊಂಡ ಪೋಷಕರು ಮೂರು ದಿನಗಳಿಂದ ಎಲ್ಲಾ ಪ್ರದೇಶಗಳಲ್ಲಿ ಹುಡುಗಾಟ ನಡೆಸಿದ್ದಾರೆ. ಎಲ್ಲಿಯೂ ಬಾಲಕ ಕಾಣಸಿಗದಿದ್ದಾಗ ಜೆ.ಜೆ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸ್ಥಳೀಯರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪಕ್ಕದ ಬಾಲಕಿಯೊಂದಿಗೆ, ಬಾಲಕ ಕಸ ಚೆಲ್ಲಲ್ಲು ತೆರಳಿದ್ದು, ವಾಪಸ್ಸಾಗುವಾಗ ಕೇವಲ ಬಾಲಕಿ ಮಾತ್ರ ಮನೆಗೆ ಬರುವ ದೃಶ್ಯ ಸೆರೆಯಾಗಿದೆ. ಆಗಸ್ಟ್ 30ರಂದು ಈ ಘಟನೆ ನಡೆದಿದೆ. ಇದೀಗ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿಗಾಗಿ ಹಳೇ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಾಲಿಕೆಯ ಎಸ್​ಡಬ್ಲ್ಯೂಡಿ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಗಿದ್ದೇನು?
ಇಮ್ರಾನ್ ಶರೀಫ್, ಗುಲ್ಶಾನ್ ದಂಪತಿಯ ಮಗ ಮಹಮ್ಮದ್ ಜಿಹಾನ್ (5) ಮೃತ ಬಾಲಕ. ಶುಕ್ರವಾರ ರಾತ್ರಿ ಜಿಹಾನ್ ತನ್ನ ಅಕ್ಕ ಮೇಹಕ್ ಜೊತೆಗೆ ಕಸ ಎಸೆಯಲು ರಾಜಕಾಲುವೆ ಬಳಿ ತೆರಳಿದ್ದಾನೆ. ಆದರೆ, ಈ ವೇಳೆ ಮಗು ಆಯತಪ್ಪಿ ರಾಜಕಾಲುವೆಗೆ ಬಿದ್ದಿದೆ. ಆದರೆ, ಈ ಘಟನೆಯಿಂದ ಹೆದರಿದ್ದ ಬಾಲಕಿ ಮೇಹಕ್ ಘಟನೆ ನಡೆದು ಮೂರು ದಿನವಾಗಿದ್ದರೂ ಮನೆಯವರಿಗೆ ಹೇಳಿರಲಿಲ್ಲ. ಹೀಗಾಗಿ ಮಗು ನಾಪತ್ತೆಯಾಗಿದೆ ಎಂದು ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಕಾರ್ಪೋರೇಟರ್ ಇಮ್ರಾನ್ ಸಹಾಯದಿಂದ ಏರಿಯಾದ ಸಿಸಿಟಿವಿ ತಪಾಸಣೆ ನಡೆಸಿದ್ದರು. ಈ ವೇಳೆ ಬಾಲಕಿ ಮೇಹಕ್ ಕಸ ಎಸೆಯಲು ಹೋಗುವಾಗ ಜೊತೆಗೆ ಜಿಹಾನ್ ಇದ್ದದ್ದು ಹಾಗೂ ಆಕೆ ವಾಪಸ್ಸಾಗುತ್ತಿದ್ದಾಗ ಒಂಟಿಯಾಗಿದ್ದ ದೃಶ್ಯ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಈ ವೇಳೆ ಜೆಜೆಆರ್ ನಗರ ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕಿ ಸತ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ.

ಮಗುವಿನ ಸಾವಿಗೆ ಬಿಬಿಎಂಪಿ ಕಾರಣ ಎಂದು ಸ್ಥಳೀಯರ ಆಕ್ರೋಶ
ಜೆಜೆ ನಗರದ ರಾಜಕಾಲುವೆಯನ್ನು ದುರಸ್ಥಿ ಮಾಡಿ ಅದರ ಸುತ್ತ ಕಟ್ಟೆ ಕಟ್ಟಿ ಅಪಘಾತಗಳು ನಡೆಯದಂತೆ ರಕ್ಷಣೆ ನೀಡಬೇಕು ಎಂದು ಇಲ್ಲಿನ ಸ್ಥಳೀಯರು ಅನೇಕ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಪಾಲಿಕೆ ಈವರೆಗೆ ಈ ಕುರಿತು ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ, ದುರಸ್ಥಿಗೆ ಹಣವನ್ನೂ ಬಿಡುಗಡೆ ಮಾಡಿಲ್ಲ. ಪಾಲಿಕೆಯಿಂದ ಹಣ ಬಿಡುಗಡೆಯಾಗದ ಪರಿಣಾಮ ಕಳೆದ ಹಲವು ವರ್ಷಗಳಿಂದ ಈ ಮೋರಿಯ ದುರಸ್ಥಿಕಾರ್ಯ ನಡೆದೇ ಇಲ್ಲ. ಇದರ ಸುತ್ತ ಯಾವುದೇ ರಕ್ಷಣಾ ಕಟ್ಟೆಗಳು ಇಲ್ಲ. ಇದೇ ಕಾರಣಕ್ಕೆ ಮಗು ಆಯತಪ್ಪಿ ಮೋರಿಗೆ ಬಿದ್ದು ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com