ನಮ್ಮ ಮೆಟ್ರೊ: ಕೊನೆಗೂ ಹಸಿರು ಮಾರ್ಗದಲ್ಲಿ 6 ಬೋಗಿಗಳ ರೈಲು ಸಂಚಾರ; ಅ.1ರಿಂದ ಆರಂಭ 

ನಾಗಸಂದ್ರದಿಂದ ಯೆಲಚೇನಹಳ್ಳಿಯವರೆಗೆ 6 ಬೋಗಿಗಳ ರೈಲು ಸಂಚಾರ ಕೊನೆಗೂ ಆರಂಭವಾಗುವ ಮುಹೂರ್ತ ಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಗಸಂದ್ರದಿಂದ ಯೆಲಚೇನಹಳ್ಳಿಯವರೆಗೆ 6 ಬೋಗಿಗಳ ರೈಲು ಸಂಚಾರ ಕೊನೆಗೂ ಆರಂಭವಾಗುವ ಮುಹೂರ್ತ ಬಂದಿದೆ. ಅಕ್ಟೋಬರ್ ನಿಂದ ಇನ್ನೂ ಹೆಚ್ಚಿನ ಆರು ಬೋಗಿಗಳ ರೈಲನ್ನು ಹಸಿರು ಮಾರ್ಗದಲ್ಲಿ ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ನಿರ್ಧರಿಸಿದೆ.


ಗ್ರೀನ್ ಲೈನ್ ಮಾರ್ಗದಲ್ಲಿ ಈಗಿರುವ ಮೂರು ಬೋಗಿಗಳ ರೈಲುಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲದ ಹೊತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ರೈಲುಗಳಲ್ಲಿ ದಟ್ಟಣೆಯಿರುತ್ತದೆ. ಹೀಗಾಗಿ ನಾರ್ತ್-ಸೌತ್ ಕಾರಿಡಾರ್ ನಲ್ಲಿ (ಗ್ರೀನ್ ಲೈನ್) ಆರು ಬೋಗಿಗಳ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ. ಅಕ್ಟೋಬರ್ 1ರಿಂದ ಓಡಾಟವನ್ನು ಆರಂಭಿಸಲಿದೆ. ಮಾರ್ಚ್ 2020ರ ವೇಳೆಗೆ ಎಲ್ಲಾ 50 ರೈಲುಗಳ ಸಂಚಾರವನ್ನು ಆರಂಭಿಸಲಾಗುವುದು ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ್ ಚವಾಣ್ ತಿಳಿಸಿದ್ದಾರೆ.


ಪರ್ಪಲ್ ಲೈನ್ ನಲ್ಲಿರುವ (ಪೂರ್ವ-ಪಶ್ಚಿಮ ಕಾರಿಡಾರ್) ಎಲ್ಲಾ ರೈಲುಗಳು ಆರು ಬೋಗಿಗಳನ್ನು ಹೊಂದಿದ್ದು ಎರಡು ಆರು ಬೋಗಿಗಳ ರೈಲುಗಳನ್ನು ಗ್ರೀನ್ ಲೈನ್ (ನಾರ್ತ್-ಸೌತ್ ಕಾರಿಡಾರ್) ನಲ್ಲಿ ನಿಯೋಜಿಸಲಾಗುತ್ತಿದೆ. ಬೆಂಗಳೂರು ಮೆಟ್ರೊ ಲಿಮಿಟೆಡ್ ನ ಒಪ್ಪಂದ ಪ್ರಕಾರ ಮುಂದಿನ ವರ್ಷ ಮಾರ್ಚ್ ವೇಳೆಗೆ ಎಲ್ಲಾ 50 ರೈಲುಗಳನ್ನು ಆರು ಬೋಗಿಗಳನ್ನಾಗಿ ಮಾಡಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಸದ್ಯ, ಬೆಂಗಳೂರು ಮೆಟ್ರೊ ರೈಲಿನ 50 ರೈಲುಗಳಲ್ಲಿ 27 ರೈಲುಗಳು ಆರು ಬೋಗಿಗಳನ್ನು ಹೊಂದಿದ್ದು 25 ರೈಲುಗಳು ಪರ್ಪಲ್ ಲೈನ್ ನಲ್ಲಿ ಮತ್ತು ಎರಡು ರೈಲುಗಳು ಗ್ರೀನ್ ಲೈನ್ ನಲ್ಲಿ ಸಂಚರಿಸುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com