'ಕನ್ನಡದ ಕೋಟ್ಯಧಿಪತಿ' ಹಾಟ್ ಸೀಟಲ್ಲಿ ತೇಜಸ್ವಿ ಸೂರ್ಯ-ಪ್ರತಾಪ್ ಸಿಂಹ!

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಈ ಬಾರಿ  ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Published: 05th September 2019 01:12 PM  |   Last Updated: 05th September 2019 01:12 PM   |  A+A-


Pratap simha And Tejasvi Surya

ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ

Posted By : Shilpa D
Source : Online Desk

ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಈ ಬಾರಿ  ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪುನೀತ್ ಜತೆ ಜಂಟಿಯಾಗಿ ಕೋಟ್ಯಾಧಿಪತಿ ಆಡಲಿದ್ದಾರೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಸೀಸನ್ 3ರಲ್ಲಿ  ಸಂಸದ ಪ್ರತಾಪ್ ಸಿಂಹ ಮತ್ತು ಜೂನಿಯರ್ ಪ್ರತಾಪ್ ಸಿಂಹ ಎಂದೆ ಕರೆಸಿಕೊಳ್ಳುವ ಬೆಂಗಳೂರಿನ ಎಂಪಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದಾರೆ.

ಶನಿವಾರ ಮತ್ತು ಬಾನುವಾರ ಪ್ರಸಾರವಾಗುವ ಕೋಟ್ಯಧಿಪತಿ ಕಾರ್ಯಕ್ರಮದ ಹಾಟ್ ಸೀಟಿನಲ್ಲಿ ಈ ಇಬ್ಬರು ಯಂಗ್ ಲೀಡರ್ಸ್ ಕುಳಿತುಕೊಂಡಿದ್ದಾರೆ.

ಬಿಜೆಪಿಯ ಈ ಇಬ್ಬರು ನಾಯಕರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಪ್ರವಾಹ ಸಂತ್ರಸ್ತರಿಗಾಗಿ ಆಡುತ್ತಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋದ ಕನಸುಗಳಿಗೆ ಜೀವ ತುಂಬಲು ಇವರಿಬ್ಬರು ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಬೀಕರ ಪ್ರವಾಹದಿಂದ ಬದುಕು ಕಳೆದುಕೊಂಡವರ ಕಷ್ಟಕ್ಕೆ ನೆರವಾಗಲು ಇಬ್ಬರು ಹಟ್ ಸೀಟ್ ಏರಿದ್ದಾರೆ. ಇಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp