ಪತ್ರಿಕೋದ್ಯಮದ ಜಿ ಸಂತಾ ಪ್ರಶಸ್ತಿಗೆ ಎಂ. ನಂಜುಂಡಸ್ವಾಮಿ ಆಯ್ಕೆ!

ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ಜಿ ಸಂತಾ ಟೀಚರ್ ಮೆಮೋರಿಯಲ್ ಪ್ರಶಸ್ತಿಗೆ ವಿಜಯ ಕರ್ನಾಟಕದ ಮೈಸೂರು ಬ್ಯೂರೋದ ಪತ್ರಕರ್ತ ಎಂ. ನಂಜುಂಡಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಎಂ. ನಂಜುಂಡಸ್ವಾಮಿ
ಎಂ. ನಂಜುಂಡಸ್ವಾಮಿ

ಬೆಂಗಳೂರು: ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ಜಿ ಸಂತಾ ಟೀಚರ್ ಮೆಮೋರಿಯಲ್ ಪ್ರಶಸ್ತಿಗೆ ವಿಜಯ ಕರ್ನಾಟಕದ ಮೈಸೂರು ಬ್ಯೂರೋದ ಪತ್ರಕರ್ತ ಎಂ. ನಂಜುಂಡಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದ ಸಾಧನೆ ಗುರುತಿಸಿ ಬೆಂಗಳೂರಿನ Inspired Indian Foundation(IIF) ಈ ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯೂ 22 ಸಾವಿರ ರು. ನಗದು, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನಲ್ಲಿ ಅಕ್ಟೋಬರ್ 19ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

2019ರ ಸಾಲಿನ 4ನೇ ಜಿ ಸಂತಾ ಟೀಚರ್ ಮೆಮೋರಿಯಲ್ ಪತ್ರಿಕೋದ್ಯಮ ಪ್ರಶಸ್ತಿಗೆ ಎಂ. ನಂಜುಂಡಸ್ವಾಮಿ ಆಯ್ಕೆಯಾಗಿದ್ದಾರೆ.

ನಿಷ್ಪಕ್ಷಪಾತ ಎಡಿಟಿಂಗ್, ಸಹೋದ್ಯೋಗಿಗಳೊಂದಿಗಿನ ಸೌಹಾರ್ದ ಸಂಬಂಧ ಮತ್ತು ಇತರೇ ಅಂಶಗಳನ್ನು ಮನಗಂಡು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 

ಕೇರಳದಲ್ಲಿ ಹೆಸರು ಮಾಡಿದ್ದ ಶಿಕ್ಷಕ, ಇಂಗ್ಲಿಷ್ ಸಾಹಿತ್ಯದಲ್ಲಿ ಹೆಸರು ಮಾಡಿದ್ದ ಜಿ ಸಂತಾ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜಿ ಸಂತಾ ತಮ್ಮ 65ನೇ ವಯಸ್ಸಿನಲ್ಲಿ(2007) ನಿಧನರಾದರು. ನಂತರ ವಿಜ್ಞಾನಿ ಅಬ್ದುಲ್ ಕಲಾಂ ಅವರ ಆಶೀರ್ವಾದೊಂದಿಗೆ ಪ್ರಶಸ್ತಿಯನ್ನು ಆರಂಭ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com