ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರು ಬೈಕ್ ಸವಾರನಿಗೆ ಬರೋಬ್ಬರಿ 17 ಸಾವಿರ ರು. ದಂಡ!

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಮೊದಲ ಬಾರಿಗೆ ಬೈಕ್ ಸವಾರ 17 ಸಾವಿರ ದಂಡ ಪಾವತಿ ಮಾಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಮೊದಲ ಬಾರಿಗೆ ಬೈಕ್ ಸವಾರ 17 ಸಾವಿರ ದಂಡ ಪಾವತಿ ಮಾಡಿದ್ದಾನೆ.

ಮೋಟಾರು ವಾಹನ ಕಾಯ್ದೆ ಜಾರಿಯ ಆದೇಶ ಪ್ರತಿ ಸಿಕ್ಕ 24 ಗಂಟೆಯಲ್ಲಿ ಮೊದಲ ಬಾರಿಗೆ ಭಾರೀ ದಂಡ ವಿಧಿಸಲಾಗಿದೆ. ಸವಾರ ಆಕಾಶ್ ಹೆಲ್ಮೆಟ್ ಧರಿಸದೇ ಕುಡಿದು ವಾಹನ ಚಲಾಯಿಸಿದ್ದಾನೆ.

ಈ ವೇಳೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಆಕಾಶ್‍ನನ್ನು ತಡೆದು ಪರಿಶೀಲನೆ ನಡೆಸಿದ್ದು, ಡಿಎಲ್ ಕೂಡ ಇಲ್ಲದಿರುವುದರಿಂದ ದಂಡ ವಿಧಿಸಿದ್ದಾರೆ. ನಿಯಮಗಳ ಅನ್ವಯ ಕುಡಿದು ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ 10 ಸಾವಿರ, ಡಿಎಲ್ ಇಲ್ಲದಿದ್ದಕ್ಕೆ 5 ಸಾವಿರ ರೂ. ಹಾಗೂ ಹೆಲ್ಮೆಟ್ ಧರಿಸಿದ ಕಾರಣ ಇಬ್ಬರಿಗೆ ತಲಾ 1 ಸಾವಿರದಂತೆ 2 ಸಾವಿರ ರೂ. ದಂಡ ಬಿಲ್ ನೀಡಿದ್ದಾರೆಂದು ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. 

ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಶಿವಣ್ಣ ಅವರು ಬೈಕ್ ಸವಾರನಿಗೆ ದಂಡ ವಿಧಿಸಿದ್ದಾರೆ. .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com