ಬೆಳಗಾವಿಯ ಪ್ರವಾಹ ಸಂತ್ರಸ್ತರಿಗೆ 'ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ' ಸಹಾಯ ಹಸ್ತ  

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹೈದರಾಬಾದ್ ಶಾಖೆಯಿಂದ ಬಂದ ಒಂದು ಟ್ರಕ್ ನೆರೆ ಪ್ರವಾಹ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಜನರಿಗೆ ಹಂಚಲಾಯಿತು. 
 

Published: 05th September 2019 12:15 PM  |   Last Updated: 05th September 2019 12:15 PM   |  A+A-


A flood victim being handed relief material sent by TNIE in Athani

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

Posted By : Sumana Upadhyaya
Source : The New Indian Express

ಬೆಳಗಾವಿ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹೈದರಾಬಾದ್ ಶಾಖೆಯಿಂದ ಬಂದ ಒಂದು ಟ್ರಕ್ ನೆರೆ ಪ್ರವಾಹ ಸಂತ್ರಸ್ತರ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಜನರಿಗೆ ಹಂಚಲಾಯಿತು. 


ಇತ್ತೀಚಿನ ನೆರೆ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಹಾನಿಯಾಗಿದ್ದು ಈ ನಿಟ್ಟಿನಲ್ಲಿ ಮಾಧ್ಯಮ ಸಂಸ್ಥೆಯಿಂದ ಪರಿಹಾರ ನೀಡಲಾಯಿತು. ಅಥಣಿಗೆ ಪರಿಹಾರ ಸಾಮಗ್ರಿಗಳು ತಲುಪುತ್ತಿದ್ದಂತೆ ತಹಶಿಲ್ದಾರ್ ಎಂ ಎನ್ ಬಾಳಿಗರ್ ಅದನ್ನು ವಿತರಿಸಲು ಸಕಲ ವ್ಯವಸ್ಥೆ ಮಾಡಿದರು.


ಪರಿಹಾರ ಸಾಮಗ್ರಿಗಳಲ್ಲಿ ಬೆಡ್ ಶೀಟ್, ದಿನನಿತ್ಯದ ಅಗತ್ಯ ವಸ್ತುಗಳು, ಚಪ್ಪಲಿ, ಬಟ್ಟೆ ಮೊದಲಾದ ಸಾಮಗ್ರಿಗಳಿದ್ದವು. ಸಮಯಕ್ಕೆ ಸರಿಯಾಗಿ ಜನರಿಗೆ ಸಹಾಯ ಮಾಡಿದ್ದಕ್ಕೆ ತಹಶಿಲ್ದಾರ್ ಸಂಸ್ಥೆಗೆ ಧನ್ಯವಾದ ಹೇಳಿದರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಹಾಯಕ್ಕೆ ಧನ್ಯವಾದ ಹೇಳಿದ ಇಲ್ಲಿನ ಹಿರಿಯ ನಾಗರಿಕ ಶಶಿಕಾಂತ್ ಹುಲ್ಕುಂಡ್, ಈ ಹಿಂದೆ ಕೂಡ ಪತ್ರಿಕಾ ಸಂಸ್ಥೆ ಕಾರ್ಗಿಲ್ ಯುದ್ಧದಲ್ಲಿ ಮಡಿದವರ ಕುಟುಂಬಸ್ಥರಿಗೆ ಮತ್ತು ಭೂಕಂಪ ಸಂಭವಿಸಿದ್ದ ಸಂದರ್ಭಗಳಲ್ಲಿ ನೆರವು ನೀಡಿತ್ತು ಎಂದು ಸ್ಮರಿಸಿಕೊಂಡರು.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp