ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾಚರಣೆ ನಿರಾಶೆಗೊಂಡ ಬಳಿಕ ಇಸ್ರೋದಿಂದ ಮಾನವ ಸಹಿತ ಗಗನಯಾನ ಕೈಗೊಳ್ಳಲು ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. 
ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ
ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾಚರಣೆ ನಿರಾಶೆಗೊಂಡ ಬಳಿಕ ಇಸ್ರೋದಿಂದ ಮಾನವ ಸಹಿತ ಗಗನಯಾನ ಕೈಗೊಳ್ಳಲು ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. 

ಭಾರತದ ಚೊಚ್ಚಲ ಗಗನಯಾನ ಯೋಜನೆಗೆ ಗಗನಯಾನಿಗಳನ್ನು ಆಯ್ಕೆ ಮಾಡಲು ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನು ಬೆಂಗಳೂರಿನ ಏರೋಸ್ಪೇಟ್ ಮೆಡಿಸಿನ್ ಇನ್ಸ್ಟಿಟ್ಯೂಟ್ ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣ ಟ್ವಿಟರ್ ತಿಳಿಸಿದೆ. 

2022ರ ವೇಳೆಗ ಇಸ್ರೋ ಗಗನಯಾನ ನೌಕೆಯ ಮೂಲಕ ಮಾನವವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ  ಉದ್ದೇಶವನ್ನು ಹೊಂದಿದೆ. ಮೂವರು ಗಗನ ಯಾತ್ರಿಗಳು ಬಾಹ್ಯಾಕಾಶದಲ್ಲಿ 7 ದಿನಗಳನ್ನು ಕಳೆಯಲಿದ್ದಾರೆ. 

ಅಭ್ಯರ್ಥಿಗಳಿಗೆ ಈಗಾಗಲೇ ದೈಹಿಕ ವ್ಯಾಯಾಮ ಪರೀಕ್ಷೆ, ವಿಕಿರಣ ಶಾಸ್ತ್ರದ ಪರೀಕ್ಷೆ, ಲ್ಯಾಪ್ ತಪಾಸಣೆ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. 

ಮೊದಲ ಸುತ್ತಿನಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ 25 ಟೆಸ್ಟ್ ಪೈಲಟ್ ಗಳು ಭಾಗಿಯಾಗಿದ್ದು, ಅಂತಿಮ ಹಂತದಲ್ಲಿ 2-3 ಟೆಸ್ಟ್ ಪೈಲಟ್ ಗಳು ಮಾತ್ರ ಆಯ್ಕೆ ಆಗಲಿದ್ದಾರೆಂದು ತಿಳಿದುಬಂದಿದೆ. 

2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರೂ.10 ಸಾವಿರ ಕೋಟಿ ವೆಚ್ಚದ ಗಗನಯಾನ ಯೋಜನೆಯನ್ನು ಪ್ರಧಾನಿ ಮೋದಿಯುರು ಘೋಷಣೆ ಮಾಡಿದ್ದರು. 

ವಿವಿಧ ಪರೀಕ್ಷೆ ಪೂರ್ಣಗೊಂಡ ಬಳಿಕರ 2019ರ ನವೆಂಬರ್ ನಲ್ಲಿ ರಷ್ಯಾಗೆ ನಾಲ್ವರು ಭಾರತೀಯರು ಗಗನಯಾತ್ರಿಗಳನ್ನು ಕಳುಹಿಸಲಾಗುತ್ತದೆ. ಅಲ್ಲಿ 15 ತಿಂಗಳ ತರಬೇತಿ ಪಡೆದು ಮರಳಲಿರುವ ಇವರಿಗೆ 6-8 ತಿಂಗಳು ಭಾರತದಲ್ಲೇ ತರಬೇತಿ ಮುಂದುವರೆಸಲಾಗುತ್ತದೆ. ಭಾರತದ ಗಗನ ಯಾತ್ರೆ ಸಕಾರಗೊಂಡರೆ ಅಮೆರಿಕಾ, ರಷ್ಯಾ ಹಾಗೂ ಚೀನಾ ಬಳಿಕ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ವಿಶ್ವದ ನಾಲ್ಕನೆ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com