ಸದ್ಯ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ, ದಂಡಕ್ಕೂ ರಸ್ತೆ ದುಸ್ಥಿತಿಗೂ ಸಂಬಂಧವಿಲ್ಲ: ಲಕ್ಷ್ಮಣ್ ಸವದಿ

ದಂಡ ಹಾಕುವುದು ರಸ್ತೆ ಸರಿಯಿಲ್ಲ ಎಂದಲ್ಲ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ. ಆದ್ದರಿಂದ ದಂಡಕ್ಕೂ, ರಸ್ತೆ ದುಸ್ಥಿತಿಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ
ಲಕ್ಷ್ಮಣ್ ಸವದಿ
ಲಕ್ಷ್ಮಣ್ ಸವದಿ

ಮೈಸೂರು: ದಂಡ ಹಾಕುವುದು ರಸ್ತೆ ಸರಿಯಿಲ್ಲ ಎಂದಲ್ಲ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ. ಆದ್ದರಿಂದ ದಂಡಕ್ಕೂ, ರಸ್ತೆ ದುಸ್ಥಿತಿಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಭಾನುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹಾಕಲಾಗುತ್ತದೆ. ಆದ್ದರಿಂದ, ರಸ್ತೆ ದುಸ್ಥಿತಿಗೂ, ದಂಡಕ್ಕೂ ಸಂಬಂಧ ಕಲ್ಪಿಸಬೇಡಿ. ತಪ್ಪು ಮಾಡಿದವರಿಗೆ ದಂಡ ಹಾಕಲಾಗುತ್ತದೆ. ಅದರಲ್ಲಿ ಹೆಚ್ಚು ಕಡಿಮೆ ಎಂಬುದು ಏನು ಇಲ್ಲ ಎಂದರು.

ಸಂಚಾರ ನಿಯಮ ಪಾಲಿಸಿದರೆ, ದಂಡ ಕಟ್ಟುವ ಪ್ರಶ್ನೆಯೇ ಉಂಟಾಗುವುದಿಲ್ಲ. ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್ ಸಂಚಾರ ಜಾರಿಗೆ ತರುವ ಕುರಿತು ಚಿಂತನೆ ನಡೆದಿದೆ. ಈ ಕುರಿತು ಹೊರದೇಶಗಳಿಂದ ಪ್ರಸ್ತಾವನೆ ಕೂಡ ಬಂದಿದೆ. ಶೂನ್ಯ ಬಂಡವಾಳ ಹೂಡಿಕೆಯಲ್ಲಿ ಶೇಕಡಾ 40, 60ರಷ್ಟು ಆದಾಯ ನಮಗೆ ನೀಡಿ, ಬಸ್ಸುಗಳ ಸಂಪೂರ್ಣ ಜವಾಬ್ದಾರಿ ಅವರೇ ಹೊತ್ತುಕೊಳ್ಳಲಿದ್ದಾರೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.
    
ಇದೇ ವೇಳೆ ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಡಿಸಿಎಂ ತಿಳಿಸಿದ್ದು, ಪ್ರಯಾಣಿಕರು ನಿರಾಳರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com