ನಾಡಹಬ್ಬ ದಸರಾಗೆ ವಿಶ್ವಚಾಂಪಿಯನ್ ತಾರೆ: ಯುವ ದಸರಾಗೆ ಚಾಲನೆ ನೀಡಲಿರುವ ಪಿವಿ ಸಿಂಧು

ಅಕ್ಟೋಬರ್ 1 ರಂದು ಆರಂಭವಾಗಲಿರುವ 'ಯುವ ದಸರಾ' ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲು ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ 

Published: 10th September 2019 05:10 PM  |   Last Updated: 10th September 2019 05:16 PM   |  A+A-


ಪಿ ವಿ ಸಿಂಧು

Posted By : Raghavendra Adiga
Source : UNI

ಬೆಂಗಳೂರು: ಅಕ್ಟೋಬರ್ 1 ರಂದು ಆರಂಭವಾಗಲಿರುವ 'ಯುವ ದಸರಾ' ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲು ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ 

ಈ ಸಂಬಂಧ ಸಿಂಧು ಅವರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ

ರಾಜ್ಯ ಸರ್ಕಾರ ಆಯೋಜಿಸಿರುವ ದಸರಾ ಉತ್ಸವ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ  ಪಡೆದಿದ್ದು, ವಿಶ್ವಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ,ಇದೊಂದು ಸಂಪ್ರದಾಯ,ಸಾಂಸ್ಕೃತಿಕ,ಕಲೆ ಹಾಗೂ ಧಾರ್ಮಿಕ ಉತ್ಸವವಾಗಿದ್ದು, ಒಂಭತ್ತು ದಿನಗಳ ಕಾಲ ನಡೆಯುವ ಈ ಆಚರಣೆ ರಾಜ್ಯದ ಪ್ರತಿಷ್ಠೆಯಾಗಿದೆ.ಪೀಳಿಗೆಯಿಂದ ಪೀಳಿಗೆ ನಡೆಸಿಕೊಂಡು ಬರುತ್ತಿರುವ ದಸರ ಉತ್ಸವಕ್ಕೆ ಹಲವಾರು ಸಾಧಕರು ಸಾಕ್ಷಿಯಾಗಿದ್ದಾರೆ.

ಕ್ರೀಡಾ ತಾರೆಯಾಗಿರುವ ತಾವು ದೇಶವೇ ಹೆಮ್ಮೆಪಡುವಂತೆ ವಿಶ್ವ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ಸಾಧನೆ ಮಾಡಿದ್ದು, ದೇಶದ ಕೀರ್ತಿ ಪತಾಕೆ  ಹಾರಿಸಿದ್ದೀರಿ.ಯುವ ದಸರಾಕ್ಕೆ ತಾವು ಆಗಮಿಸುವುದರಿಂದ ಯುವ ಮನಸುಗಳಿಗೆ ಗುರಿಗ ತಲುಪಿ ಸಾಧನೆ ಮಾಡಲು ಪ್ರೇರಣೆ ದೊರೆಯಲಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp