'ಮೌನ ಮುರಿದು ಮಾತನಾಡು ಒಮ್ಮೆ': ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!

ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲಿಳಿದಿದ್ದರೂ ಸಂಪರ್ಕ ಸಾಧ್ಯವಾಗದೆ ಹೋಗಿದ್ದು  ಇಸ್ರೋ ಸಂಶೋಧಕರು ಸಂಪರ್ಕ ಮರುಸ್ಥಾಪನೆಗೆ ಸತತ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ನಗರ ಪೋಲೀಸರು ವಿಕ್ರಮ್ ಲ್ಯಾಂಡರ್ ಗಾಗಿ ವಿಶೇಷ ಪದ್ಯ ಬರೆದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
'ಮೌನ ಮುರಿದು ಮಾತನಾಡು ಒಮ್ಮೆ,'-ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!
'ಮೌನ ಮುರಿದು ಮಾತನಾಡು ಒಮ್ಮೆ,'-ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!

ಬೆಂಗಳೂರು: ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲಿಳಿದಿದ್ದರೂ ಸಂಪರ್ಕ ಸಾಧ್ಯವಾಗದೆ ಹೋಗಿದ್ದು  ಇಸ್ರೋ ಸಂಶೋಧಕರು ಸಂಪರ್ಕ ಮರುಸ್ಥಾಪನೆಗೆ ಸತತ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ನಗರ ಪೋಲೀಸರು ವಿಕ್ರಮ್ ಲ್ಯಾಂಡರ್ ಗಾಗಿ ವಿಶೇಷ ಪದ್ಯ ಬರೆದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಬೆಂಗಳುರು ನಗರ ಪೋಲೀಸ್ ಅಧಿಕೃತ ಟ್ವಿಟ್ತರ್ ಖಾತೆಯಲ್ಲಿ ವಿಕ್ರಮ್ ಗಾಗಿ ಬರೆದ ಪದ್ಯವನ್ನು ಬರೆಯಲಾಗಿದೆ.

"ಪ್ರೀತಿಯ ವಿಕ್ರಮ್,

ಹಗಲಿರುಳ  ಶ್ರಮದ ಫಲ ನೀನು,
ನಿನ್ನ ಮಾತಿಗಾಗಿ ಕಾಯುತಿರುವೆ ನಾನು!
ಮೌನ ಮುರಿದು ಮಾತನಾಡು ಒಮ್ಮೆ,,
ಆಗುವುದೆಲ್ಲ ಆಗೇ ಬಿಡಲಿ ನಾನಿರುವೆ!"

ಎಂದು ಬರೆದು ಕೆಳಗೆ ಇಂತಿ ನಿನ್ನ ಭಾರತಾಂಬೆ ಎಂದು ಸಹಿ ಹಾಕಲಾಗಿದೆ.

ನಿನ್ನೆಯಷ್ಟೇ ಮಹಾರಾಷ್ಟ್ರದ ನಾಗಪುರ ಪೋಲೀಸರು ವಿಕ್ರಮ್ ಲ್ಯಾಂಡರ್ ಗೆ ದಯವಿಟ್ಟು ಪ್ರತಿಕ್ರಯಿಸು, ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ನಾವು ನಿನಗೆ ದಂಡ ಹಾಕಲ್ಲ ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದು ಸಾಮಾಜಿಕ ತಾಣದಲ್ಲಿ ಬಹುವಿಧದ ಪ್ರತಿಕ್ರಿಯೆಗೆ ಕಾರಣವಾಗಿತ್ತು ಎಂದು ನಾವಿಲ್ಲಿ ನೆನೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com