ಮೈಸೂರು: ಪ್ರೀತಿಗೆ ಕುಟುಂಬದ ವಿರೋಧ, ಲಕ್ಷ್ಮಣತೀರ್ಥಕ್ಕೆ ಹಾರಿ ಪ್ರೇಮಿಗಳ ಆತ್ಮಹತ್ಯೆ!

ಪ್ರೀತಿಗೆ ಕುಟುಂಬ ಸದಸ್ಯರು ವಿರೋಧಿಸಿದ್ದ ಹಿನ್ನೆಲೆ ಬೇಸರಗೊಂಡ ಪ್ರೇಮಿಗಳು ಮೈಸೂರಿನ ಲಕ್ಷ್ಮಣತೀರ್ಥಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published: 10th September 2019 11:20 AM  |   Last Updated: 10th September 2019 11:49 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ಮೈಸೂರು: ಪ್ರೀತಿಗೆ ಕುಟುಂಬ ಸದಸ್ಯರು ವಿರೋಧಿಸಿದ್ದ ಹಿನ್ನೆಲೆ ಬೇಸರಗೊಂಡ ಪ್ರೇಮಿಗಳು ಮೈಸೂರಿನ ಲಕ್ಷ್ಮಣತೀರ್ಥಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನ  ಹೊಸೂರು ಕಲ್ಲಹಳ್ಳಿಯ ರಂಜಿತಾ (19) ಮತ್ತು ಮೈಸೂರು ವಿಜಯನಗರ ನಿವಾಸಿ ಶಿವು (21)  ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರ ವಿವಾಹಕ್ಕೆ ಇಬ್ಬರ ಕುಟುಂಬದಲ್ಲಿಯೂ ಸಮ್ಮತಿ ಇರಲಿಲ್ಲ. ಹಾಗಾಗಿ ತಾವು ಆತ್ಮಹತ್ಯೆ ದಾರಿ ಹಿಡಿದರೆಂದು ಹೇಳಲಾಗಿದೆ.

ಈ ಯುವಜೋಡಿ  ಮೈಸೂರಿನ  ಸಾಗರಕಟ್ಟೆ ಬಳಿ ಹರಿಯುವ ಲಕ್ಷ್ಮಣತೀರ್ಥ ನದಿ ಸಮೀಪಕ್ಕೆ ತೆರಳಿದ್ದು ಸೋಮವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕೆ ಹುಡುಕಾಟ ನಡೆಸಿದ್ದಾರೆ. ಘಟನೆ ಕುರಿತಂತೆ ಇಲವಾಲ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿ

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp