ಬಳ್ಳಾರಿ: ಸೆಲ್ಫಿ ಹುಚ್ಚಿಗೆ ಇಬ್ಬರು ಯುವಕರು ನೀರು ಪಾಲು

ತೆಪ್ಪದಲ್ಲಿ ಸಾಗುವಾಗ ಸೆಲ್ಫೀ ತೆಗೆದುಕೊಳ್ಳಲು ಹೋದ ಇಬ್ಬರು ಯುವಕರು ತೆಪ್ಪ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಡಣಾಯಕನ ಕೆರೆ ಗ್ರಾಮದಲ್ಲಿ ಸಂಭವಿಸಿದೆ.

Published: 10th September 2019 09:51 PM  |   Last Updated: 10th September 2019 09:51 PM   |  A+A-


NRI businessman found dead in Delhi's Taj Palace hotel

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬಳ್ಳಾರಿ: ತೆಪ್ಪದಲ್ಲಿ ಸಾಗುವಾಗ ಸೆಲ್ಫೀ ತೆಗೆದುಕೊಳ್ಳಲು ಹೋದ ಇಬ್ಬರು ಯುವಕರು ತೆಪ್ಪ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಡಣಾಯಕನ ಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಡಣಾಯಕನ ಕೆರೆ ಗ್ರಾಮದ ಇಬ್ಬರು ಯುವಕರು ತುಂಬಿ ಹರಿಯುತ್ತಿರುವ ತುಂಗಭದ್ರಾ ಜಲಾಶಯದ ಹಿನ್ನೀರಲ್ಲಿ ತೆಪ್ಪದಲ್ಲಿ ತೆರಳುತ್ತಿದ್ದರು. ಅದರಲ್ಲಿ ಕುಳಿತು ಮೊಬೈಲ್ ನಲ್ಲಿ ಸೆಲ್ಫಿ ತೆಗೆಯುವ ವೇಳೆ ತೆಪ್ಪ ಮುಳುಗಿ ನೀರು ಪಾಲಾಗಿದ್ದಾರೆ.

ಹರೀಶ್ ಮತ್ತು ಬಸವರಾಜ್ ನೀರು ಪಾಲಾದ ದುರ್ದೈವಿಗಳು. ವಿಷಯ ತಿಳಿಯುತ್ತಿದ್ದಂತೆ ಮೃತ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp