ಕೇವಲ 9 ದಿನಗಳಲ್ಲಿ ಚುನಾವಣಾ ಆಯೋಗಕ್ಕೆ 21 ಸಾವಿರ ದೂರು ಅರ್ಜಿಗಳು!

ಚುನಾವಣಾ ಗುರುತು ಪತ್ರದಲ್ಲಿ ತಿದ್ದುಪಡಿಗೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೇವಲ 9 ದಿನಗಳಲ್ಲಿ 21 ಸಾವಿರದ 674 ದೂರುಗಳು ಬಂದಿವೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚುನಾವಣಾ ಗುರುತು ಪತ್ರದಲ್ಲಿ ತಿದ್ದುಪಡಿಗೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೇವಲ 9 ದಿನಗಳಲ್ಲಿ 21 ಸಾವಿರದ 674 ದೂರುಗಳು ಬಂದಿವೆ. 


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾ ಜಂಟಿ ಅಧಿಕಾರಿ ಶಂಭು ಭಟ್, ಸೆಪ್ಟೆಂಬರ್ 9ರವರೆಗೆ ಚುನಾವಣಾ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಕೋರಿ 21 ಸಾವಿರದ 674 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.


ಇವುಗಳಲ್ಲಿ 2 ಸಾವಿರದ 315 ಬೆಂಗಳೂರು ನಗರ ಭಾಗದಿಂದ, 238 ಬೆಂಗಳೂರು ಗ್ರಾಮಾಂತರ, 1 ಸಾವಿರದ 78 ಬೆಂಗಳೂರು ಉತ್ತರ, 984 ಬೆಂಗಳೂರು ದಕ್ಷಿಣ ಮತ್ತು 1 ಸಾವಿರದ 60 ಅರ್ಜಿಗಳು ಬೆಂಗಳೂರು ಕೇಂದ್ರ ಭಾಗದಿಂದ ಬಂದಿವೆ. ಪ್ರತಿ ಅರ್ಜಿಗಳನ್ನು ಪರಿಶೀಲನೆ ಮಾಡಬೇಕಾಗಿದ್ದರೂ ಬಹುತೇಕ ಅರ್ಜಿಗಳು ತಿದ್ದುಪಡಿ ಕೋರಿ ಸಲ್ಲಿಕೆಯಾದವುಗಳಾಗಿವೆ.  ಗುರುತು ಚೀಟಿಯಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ, ಚುನಾವಣಾ ಗುರುತು ಸಂಖ್ಯೆ ಮತ್ತು ವಿಳಾಸ ಬದಲಾವಣೆ ಕೋರಿ ಬಂದ ಅರ್ಜಿಗಳಾಗಿವೆ.


ಪರಿಶೀಲನೆ ಮತ್ತು ತಿದ್ದುಪಡಿಗೂ ಮುಂದಿನ ಉಪ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಮತದಾರರ ಪಟ್ಟಿಯನ್ನು ಅಪ್ ಡೇಟ್ ಮಾಡಬೇಕಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com