ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್‌ಗಳ ನಡುವೆ ಡಿಕ್ಕಿ: 200 ಪ್ರಯಾಣಿಕರು ಪಾರು

ಜಿಲ್ಲೆಯ ಪ್ರಸಿದ್ಧ ಸಿಗಂಧೂರೇಶ್ವರಿ ದೇವಾಲಯಕ್ಕೆ ಹೋಗುವ ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. 

Published: 11th September 2019 01:36 PM  |   Last Updated: 11th September 2019 01:36 PM   |  A+A-


Two ferries carrying 200 commuters collides on Sharavathi river

ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್‌ಗಳ ನಡುವೆ ಡಿಕ್ಕಿ

Posted By : Shilpa D
Source : UNI

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಸಿಗಂಧೂರೇಶ್ವರಿ ದೇವಾಲಯಕ್ಕೆ ಹೋಗುವ ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. 

ಅಂಬಾರಗೋಡ್ಲು ದಡದಲ್ಲಿ ಬಾರ್ಜ್ ಗಳನ್ನು ತಿರುಗಿಸುವ ವೇಳೆ ಒಂದಕ್ಕೊಂದು ಗುದ್ದಿಕೊಂಡಿರುವ ಪರಿಣಾಮ ಎರಡೂ ಬಾರ್ಜ್ ಗಳು ಜಖಂಗೊಂಡಿವೆ. ನದಿಯ ಮಧ್ಯಭಾಗದಲ್ಲೇ ಈ ಅಪಘಾತ. ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚಾಲಕರ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಇದರಲ್ಲಿ 200 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರೆಲ್ಲೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚಾಲಕರ ನಿರ್ಲಕ್ಷ್ಯದಿಂದ ನಡೆದ ಈ ಅಪಘಾತದ ಬಗ್ಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಳಿಕವೂ ಎಂದಿನಂತೆ ಬಾರ್ಜ್ ಗಳು ಸಂಚಾರ ನಡೆಸುತ್ತಿವೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp