ಬೆಂಗಳೂರು: ಕುಡಿದು, ತಿಂದ ಬಳಿಕ ಬಿಲ್ ಕೇಳಿದ ಬಾರ್ ಕ್ಯಾಷಿಯರ್ ನನ್ನೇ ಅಟ್ಟಾಡಿಸಿ ಕೊಂದ್ರು!

ಬಾರ್ ಗೆ ಬಂದು ಕಂಠ ಮಟ್ಟ ಕುಡಿದು ತಿಂದು ಬಳಿಕ ಬಿಲ್ ಕೇಳಿದಾಗ ಕ್ಯಾಷಿಯರ್ ನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳುರಿನ ಇಟ್ಟಮಡುವಿನಲ್ಲಿ ನಡೆದಿದೆ.
 

Published: 12th September 2019 01:29 PM  |   Last Updated: 12th September 2019 01:29 PM   |  A+A-


ವೆಂಕಟೇಶ್

Posted By : Raghavendra Adiga
Source : Online Desk

ಬೆಂಗಳೂರು: ಬಾರ್ ಗೆ ಬಂದು ಕಂಠ ಮಟ್ಟ ಕುಡಿದು ತಿಂದು ಬಳಿಕ ಬಿಲ್ ಕೇಳಿದಾಗ ಕ್ಯಾಷಿಯರ್ ನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳುರಿನ ಇಟ್ಟಮಡುವಿನಲ್ಲಿ ನಡೆದಿದೆ.

ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ  ಇಟ್ಟಮಡುವಿನ ಮಂಜುನಾಥ್​ ಬಾರ್​ ನ ಕ್ಯಾಷಿಯರ್ ವೆಂಕಟೇಶ್​ (35) ನನ್ನು ದುಷ್ಕರ್ಮಿಗಳು ರಸ್ತೆ ತುಂಬಾ ಅಟ್ಟಾಡಿಸಿ ಚೇರ್ ನಿಂದ ಹಲ್ಲೆ ಮಾಡಿದ್ದು  ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೃತ್ಯ ನಡೆಸಿದ ನಂತರ ಅಪರಾಧಿಗಳು ಪಾರರಿಯಾಗಿದ್ದಾರೆ.

ಘಟನೆ ವಿವರ

ಬುಧವಾರ ರಾತ್ರಿ ಇಟ್ಟಮಡುವಿನ ಬಾರ್ ಗೆ ಆಗಮಿಸಿದ್ದ ಮೂವರು ದುಷ್ಕರ್ಮಿಗಳು ಊಟ ಮಾಡಿದ್ದು, ಕಂಠಮಟ್ಟ ಮದ್ಯ ಸೇವನೆ ಮಾಡಿದ್ದರು. ಬಳಿಕ ಬಿಲ್ ಕೊಡುವ ವೇಳೆ ಗಲಾಟೆ ನಡೆದಿದೆ. ಅಲ್ಲದೆ ಅಲ್ಲೇ ಪಕ್ಕದ ಬೀಡಾ ಅಂಗಡಿಯಲ್ಲಿಯೂ ಚಿಲ್ಲರೆ ಸಂಬಂಧ ಜಗಳ ತೆಗೆದಿದ್ದಾರೆ. 

ಈ ವೇಳೆ ವೆಂಕಟೇಶ್ ಆಗಮಿಸಿ ಗಲಾಟೆ ಮಾಡಬೇಡಿ ಎಂದು ಕೇಳಿದ್ದಾನೆ. ಅಲ್ಲದೆ ಬಿಲ್ ಕೊಟ್ಟು ಹೋಗಿ ಎಂದು ಒತ್ತಾಯಿಸಿದ್ದಾನೆ. ಇದರಿಂದ ಕುಪಿತರಾದ ದುಷ್ಕರ್ಮಿಗಳು ವೆಂಕಟೇಶ್ ಜತೆ ವಾದಕ್ಕೆ ಇಳಿದಿದ್ದಾರೆ. ಅಲ್ಲದೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದಾರೆ. ಕಡೆಗೆ ರಸ್ತೆ ತುಂಬಾ ಆತನನ್ನು ಅಟ್ಟಾಡಿಸಿಕೊಂಡು ಹೋದ ಮೂವರೂ ಅವನನ್ನು ಕೊಂದು ಪಾರಾರಿಯಾಗಿದ್ದಾರೆ.

ಮೂಲತ: ಕುಣಿಗಲ್‌ ಬಳಿಯ ಮನವಳ್ಳಿ ಗ್ರಾಮದ ನಿವಾಸಿಯಾಗಿದ್ದ ವೆಂಕಟೇಶ್ ಕೆಲ ವರ್ಷಗಳಿಂದ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಊರಿಗೆ ತೆರಳಿದ್ದ. ಅಲ್ಲಿಯೇ ತೋಟ ನೋಡಿಕೊಳ್ಳಲು ನಿರ್ಧರಿಸಿದ್ದಎರಡು ತಿಂಗಳ ಊರಿನಲ್ಲಿ ಇದ್ದ ವೆಂಕಟೇಶ್​​​ ನು ಇತ್ತೀಚೆಗೆ ಬೆಂಗಳೂರಿಗೆ ಮರಳಿ ಬಂದಿದ್ದ ಎಂದು ಹೇಳಲಾಗಿದೆ.

ಘಟನೆ ಸಂಬಂಧ ಇಟ್ತಮಡು ಠಣೆಯ ಪೋಲೀಸರು ತನಿಖೆ ಕೈಗೊಂಡಿದ್ದು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp