ಹಾಸನ: ಕೆರೆಗೆ ಹಾರಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಪೋಷಕರು ಶಾಲಾ ಅಂಕಪಟ್ಟಿ ತೋರಿಸು ಎಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನದ ಇಂದಿರಾ ನಗರದಲ್ಲಿ ನಡೆದಿದೆ.

Published: 12th September 2019 07:18 PM  |   Last Updated: 12th September 2019 07:18 PM   |  A+A-


TV reporter, family found dead in suspected blast at home near Chennai

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಹಾಸನ: ಪೋಷಕರು ಶಾಲಾ ಅಂಕಪಟ್ಟಿ ತೋರಿಸು ಎಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನದ ಇಂದಿರಾ ನಗರದಲ್ಲಿ ನಡೆದಿದೆ.

ನಗರದ ವಿಜಯ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಮಿತ್, ತನ್ನ ತಾಯಿಯ ಫೋನ್ ನಿಂದ ತಂದೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕೆರೆಗೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.

ಹಾಸನ ಸಮೀಪದ ಸತ್ಯಮಂಗಲ ಕೆರೆಗೆ ಅಮಿತ್  ಬುಧವಾರ ರಾತ್ರಿ ಹಾರಿ ಆತ್ಮಹತ್ಯೆಮಾಡಿಕೊಂಡಿದ್ದು,  ಮೃತ ದೇಹಕ್ಕಾಗಿ ಬೋಟ್ ಮೂಲಕ ರಕ್ಷಣಾ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಅಮಿತ್, ಎರಡು ವಿಷಯದಲ್ಲಿ ಅನುತೀರ್ಣನಾಗಿದ್ದರಿಂದ ಪೋಷಕರಿಗೆ ಅಂಕಪಟ್ಟಿ ತೋರಿಸಿರಲಿಲ್ಲ ಎಂದು ತಿಳಿದು ಬಂದಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp