ನೋ ಪಾರ್ಕಿಂಗ್'ನಲ್ಲಿ ಜೀಪ್ ನಿಲ್ಲಿಸಿದ ಪೊಲೀಸ್: ನಿಯಮ ಉಲ್ಲಂಘಿಸಿದ್ದಕ್ಕೆ ದುಪ್ಪಟ್ಟು ದಂಡ 

ಸಂಚಾರ ನಿಯಮ ದಂಡಾಸ್ತ್ರ ಪ್ರಯೋಗ ಖಾಕಿಧಾರಿಗಳಿಗೂ ಬಿಸಿ ತಟ್ಟಿದ್ದು, ನೋ ಪಾರ್ಕಿಂಗ್ ನಲ್ಲಿ ಜೀಪ್ ನಿಲ್ಲಿಸಿದ ತಪ್ಪಿಗೆ ಸಂಚಾರ ಠಾಣೆ ಇನ್ಸ್ ಪೆಕ್ಟರ್'ವೊಬ್ಬರು ದುಪ್ಪಟ್ಟು ದಂಡ ತೆತ್ತಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಂಚಾರ ನಿಯಮ ದಂಡಾಸ್ತ್ರ ಪ್ರಯೋಗ ಖಾಕಿಧಾರಿಗಳಿಗೂ ಬಿಸಿ ತಟ್ಟಿದ್ದು, ನೋ ಪಾರ್ಕಿಂಗ್ ನಲ್ಲಿ ಜೀಪ್ ನಿಲ್ಲಿಸಿದ ತಪ್ಪಿಗೆ ಸಂಚಾರ ಠಾಣೆ ಇನ್ಸ್ ಪೆಕ್ಟರ್'ವೊಬ್ಬರು ದುಪ್ಪಟ್ಟು ದಂಡ ತೆತ್ತಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. 

ಸದಾಶಿವನಗರ ಸಂಚಾರ ಠಾಣೆ ಶಿವಕುಮಾರ್ ಅವರಿಗೆ ದಂಡ ಬಿದ್ದಿದ್ದು, ಜೀಪ್ ಚಾಲಕ ಡಿ.ಎಸ್.ನಾಗೇಂದ್ರ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ ಸಂಚಾರ ವಿಭಾಗದ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೊಡ ಆದೇಶಿಸಿದ್ದಾರೆ. 

ಸಂಚಾರ ನಿಯಮಗಳನ್ನು ಸಮವಸ್ತ್ರಧಾರಿ ಪೊಲೀಸರು ಉಲ್ಲಂಘಿಸಿದರೆ ದುಪ್ಪಟ್ಟು ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸೂಚಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com