ಮಾನವ ಕಳ್ಳಸಾಗಣೆ: ಕೆಎಸ್ಆರ್ ರೈಲ್ವೇ ನಿಲ್ದಾಣದಲ್ಲಿ ನೇಪಾಳಿ ಯುವತಿ ರಕ್ಷಣೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ನಡೆಯುತ್ತಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ನಡೆಯುತ್ತಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. 

ಮಾರಾಟಗೊಂಡಿದ್ದ 15 ವರ್ಷದ ನೇಪಾಳ ಮೂಲದ ಯುವತಿಯನ್ನು ರೈಲ್ವೇ ರಕ್ಷಣಾ ಪಡೆ ರಕ್ಷಣೆ ಮಾಡಿದೆ. 

ಕೆಲ ತಿಂಗಳ ಹಿಂದೆ 40 ವ್ಯಕ್ತಿಯೊಬ್ಬನಿಗೆ ಹುಡುಗಿಯನ್ನು ಮಾರಾಟ ಮಾಡಿದ್ದು, ವ್ಯಕ್ತಿ ಯುವತಿಯನ್ನು ಬಲವಂತದಿಂದ ವಿವಾಹವಾಗಿದ್ದಾನೆ. ವ್ಯಕ್ತಿಯ ಮನೆಯಿಂದ ಓಡಿ ಬಂದಿದ್ದ ಯುವತಿ ರೈಲ್ವೇ ನಿಲ್ದಾಣದಲ್ಲಿ ಆಘಾತಕ್ಕೊಳಗಾದ ಸ್ಥಿತಿಯಲ್ಲಿ ಕುಳಿತಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಈ ವೇಳೆ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. 

ವಿಭಾಗೀಯ ಹಿರಿಯ ಭದ್ರತಾ ಆಯುಕ್ತ ದಬಶ್ಮಿತ ಚಟ್ಟೋಪಧಅಯಾಯ ಬ್ಯಾನರ್ಜಿಯವರು ಮಾತನಾಡಿ, ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ ಯುವತಿಯ ಸಂಬಂಧಿಕ, ನಂತರ ಆಕೆಯನ್ನು ಹಿಮಾಚಲ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬೆಂಗಳೂರು ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ವ್ಯಕ್ತಿಗೆ ಈಗಾಗಲೇ ವಿವಾಹವಾಗಿದ್ದು, ಮತ್ತೆ ಯುವತಿಯನ್ನು ಮದುವೆಯಾಗಿದ್ದೇನೆ. ಬಳಿಕ ಬೆಂಗಳೂರಿಗೆ ಕರೆ ತಂದಿದ್ದಾನೆಂದು ಹೇಳಿದ್ದಾರೆ. 
 
ವ್ಯಕ್ತಿಯಿಂದ ಹೇಗೋ ತಪ್ಪಿಸಿಕೊಂಡಿರುವ ಯುವತಿ ನಂತರ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾಳೆ. ಯುವತಿ ಆಘಾತಕ್ಕೊಳಗಾಗಿದ್ದಾಳೆ. ಯುವತಿ ತಾನಿರುವ ಸ್ಥಳದ ಮಾಹಿತಿಯಾಗಲೀ ಅಥವಾ ತನ್ನನ್ನು ಖರೀದಿ ಮಾಡಿದ ವ್ಯಕ್ತಿಯ ಬಗ್ಗೆಯಾಗಲೀ ಮಾಹಿತಿ ನೀಡುವ ಸ್ಥಿತಿಯಲ್ಲಿ ಇಲ್ಲ. ಮೆಜೆಸ್ಟಿಕ್'ನ ಸುತ್ತಮುತ್ತ ಯುವತಿ ಇದ್ದಿರಬಹುದು ಎಂದು ಶಂಕಿಸಲಾಗಿದೆ. ಕಾಲ್ನಡಿಗೆಯ ಮೂಲಕ ಯುವತಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾಳೆಂದು ತಿಳಿಸಿದ್ದಾರೆ. 

ಪ್ರಸ್ತುತ ಯುವತಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದ್ದು, ನೇಪಾಳ ದೇಶಕ್ಕೆ ಕಳುಹಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com