ಸುಯೋಗ ತಂಡದಿಂದ 'ಹುಡುಕಾಟ' ನಾಟಕ ಪ್ರದರ್ಶನ

ಬೆಂಗಳೂರಿನ ಹವ್ಯಾಸಿ ಕಲಾ ತಂಡ ಸುಯೋಗ ಇದೇ ಭಾನುವಾರ 'ಹುಡುಕಾಟ' ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

Published: 13th September 2019 08:46 PM  |   Last Updated: 13th September 2019 11:38 PM   |  A+A-


'Hudukaata' drama show by Suyoga team

ಸುಯೋಗ ತಂಡದ ನಾಟಕ ತರಬೇತಿ

Posted By : Srinivasamurthy VN
Source : Online Desk

ಬೆಂಗಳೂರು: ಬೆಂಗಳೂರಿನ ಹವ್ಯಾಸಿ ಕಲಾ ತಂಡ ಸುಯೋಗ ಇದೇ ಭಾನುವಾರ 'ಹುಡುಕಾಟ' ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ನಾಟಕ ಪ್ರದರ್ಶನ ನೀಡಿ ಯಶಸ್ಸು ಗಳಿಸಿರುವ ಸುಯೋಗ ತಂಡ ಇದೀಗ ಸೆಪ್ಟೆಂಬರ್ 15 ಅಂದರೆ ಇದೇ ಭಾನುವಾರದಂದು ಬೆಂಗಳೂರಿನ್ ಎನ್.ಆರ್. ಕಾಲೋನಿಯಲ್ಲಿರುವ 
ಪ್ರಭಾತ್ ಕಲಾಪೂರ್ಣಮಾ ರಂಗಮಂದಿರದಲ್ಲಿ ಹುಡುಕಾಟ ನಾಟಕ ಪ್ರದರ್ಶನ ಮಾಡುತ್ತಿದೆ.

width=100%

ಮನುಷ್ಯ ತನಗೆ ಸಿಕ್ಕಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳದೇ ಮತ್ತಿನ್ನೇನೋ ಬೇಕು ಎಂದು ಹುಡುಕುತ್ತಿರುತ್ತಾನೆ. ಅವನ ಈ ಹುಡುಕಾಟದಲ್ಲಿ ಯಾಂತ್ರಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಆತನ ಪ್ರಯತ್ನವನ್ನು ನಾಟಕದಲ್ಲಿ ಹಾಸ್ಯಾತ್ಮಕವಾಗಿ ತೋರಿಸಲಾಗಿದೆ.

ಡುಂಡಿರಾಜ್ ರಚನೆಯ ಈ ನಾಟಕವನ್ನು ವಾಸುಕೇಶನ್ ಅವರು ನಿರ್ದೇಶಿಸುತ್ತಿದ್ದು, ಪ್ರದೀಪ್ ಬಿ ವಿ ಮತ್ತು ಪಾಣಿನಿ ದೇರಾಜೆ ಅವರು ಸಂಗೀತ ಸಂಯೋಜಿಸಿದ್ದಾರೆ. ಉಳಿದಂತೆ ಮಂಜು ನಾರಾಯಣ್ (ಬೆಳಕು) ಜಯರಾಜ್ ಹೊಸ್ಕೂರು (ಪ್ರಸಾದನ) ಶಾಂತಿರಾವ್ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಉದಯೋನ್ಮುಖ ನಟರಾದ ಯಶವಂತ್ ಕುಮಾರ್, ಶ್ರೀಕಾಂತ್ ಆಚಾರ್, ಶಾಂತಿರಾವ್, ಗೌತಮ್ ಮತ್ತು ಸತೀಶ್ ತೆರೆ ಹಂಚಿಕೊಳ್ಳಲಿದ್ದು, ಇವರೊಂದಿಗೆ ನಿರ್ದೇಶಕ ವಾಸುಕೇಶನ್ ಅವರೂ ಕೂಡ ಸಾಥ್ ನೀಡುತ್ತಿದ್ದಾರೆ.

width=100%

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಳಾಸ ಸಂಪರ್ಕಿಸಬಹುದು.

width=100%

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp