ಹಿಂದಿಯೇತರ ಭಾಷಿಗರಿಗೆ ಉದ್ಯೋಗ ಸಿಗದಂತೆ ಕೇಂದ್ರದಿಂದ ಪಿತೂರಿ: ಸಿದ್ದರಾಮಯ್ಯ

ಕನ್ನಡದಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಸಿದಿರುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಹಿಂದಿಯೇತರ ಭಾಷಿಗರಿಗೆ ಬ್ಯಾಂಕ್ ಉದ್ಯೋಗ ಸಿಗದಂತೆ ತಡೆಯುವ ಪಿತೂರಿ ಎಂದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕನ್ನಡದಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಸಿದಿರುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಹಿಂದಿಯೇತರ ಭಾಷಿಗರಿಗೆ ಬ್ಯಾಂಕ್ ಉದ್ಯೋಗ ಸಿಗದಂತೆ ತಡೆಯುವ ಪಿತೂರಿ ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದಿಂದ 26 ಬಿಜೆಪಿಯ ಸಂಸದರು ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿಯದ್ದೇ ಸರ್ಕಾರವಿದೆ. ಆದರೂ ಸಹ ಐಬಿಪಿಎಸ್ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲು ಬಿಜೆಪಿ ನಾಯಕರು ವಿಫಲರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ನಾಡು, ನುಡಿ ಬಗ್ಗೆ ಬಿಜೆಪಿ ನಾಯಕರಿಗೆ ಬದ್ಧತೆ ಇಲ್ಲ. ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಅವಕಾಶ ಮಾಡಿಕೊಡದೇ ಬಿಜೆಪಿ ನಾಯಕರು ಹಿಂದಿ ಹೇರಿಕೆ ಪ್ರಯತ್ನ ಮಾಡುತ್ತಿದ್ದಾರೆ. ಭಾಷಾ ವೈವಿಧ್ಯತೆ ಶಕ್ತಿಯ ಬಗ್ಗೆ ಬಿಜೆಪಿಗೆ ನಾವೆಲ್ಲಾ ಪಾಠ ಕಲಿಸಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com