ಪ್ರಧಾನಿ ಮೋದಿ ಬಂದಿದ್ದು ಇಸ್ರೊ ವಿಜ್ಞಾನಿಗಳಿಗೆ ಅಪಶಕುನವಾಯಿತು: ಹೆಚ್.ಡಿ. ಕುಮಾರಸ್ವಾಮಿ 

ಚಂದ್ರಯಾನ-2 ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಚಾರ ಗಿಟ್ಟಿಸಲು ಬೆಂಗಳೂರಿನ ಬಂದರು, ಅವರು ಇಸ್ರೊ ಕೇಂದ್ರಕ್ಕೆ ಕಾಲಿಟ್ಟದ್ದೇ ತಡ ವಿಜ್ಞಾನಿಗಳಿಗೆ ಅದು ಅಪಶಕುನ ಆಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. 
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಮೈಸೂರು: ಚಂದ್ರಯಾನ-2 ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಚಾರ ಗಿಟ್ಟಿಸಲು ಬೆಂಗಳೂರಿನ ಬಂದರು, ಅವರು ಇಸ್ರೊ ಕೇಂದ್ರಕ್ಕೆ ಕಾಲಿಟ್ಟದ್ದೇ ತಡ ವಿಜ್ಞಾನಿಗಳಿಗೆ ಅದು ಅಪಶಕುನ ಆಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.


ಮೈಸೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಯಾನ-2 ಬಾಹ್ಯಾಕಾಶ ಯೋಜನೆಗೆ ವಿಜ್ಞಾನಿಗಳು 10ರಿಂದ 12 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದರು. ಚಂದ್ರಯಾನ-2ಗೆ 2008-09ರಲ್ಲಿಯೇ ಅನುಮೋದನೆ ನೀಡಿ ಅದೇ ವರ್ಷ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಅದರ ಶ್ರೇಯಸ್ಸನ್ನೆಲ್ಲ ತಾವೇ ಪಡೆದುಕೊಳ್ಳಲು ಮೋದಿಯವರು ಬೆಂಗಳೂರಿಗೆ ಬಂದರು. ಮೋದಿ ಅವರು ಇಸ್ರೊ ಕೇಂದ್ರಕ್ಕೆ ಕಾಲಿಟ್ಟ ಗಳಿಗೆ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಅನ್ಸುತ್ತೆ ಎನ್ನುವ ಮೂಲಕ ಚಂದ್ರಯಾನ  2 ವಿಫಲವಾಗಿದ್ದರ ಬಗ್ಗೆ ಮೋದಿಯವರನ್ನು ಲೇವಡಿ ಮಾಡಿದರು. 


ರಾಜ್ಯದಲ್ಲಿ ನೆರೆ ಪರಿಹಾರಕ್ಕೆ 3 ಸಾವಿರದ 800 ಕೋಟಿ ಪರಿಹಾರವನ್ನು ರಾಜ್ಯ ಕೇಳಿದರೆ ಕೇಂದ್ರದಿಂದ  ಯಾವುದೇ ಪರಿಹಾರ ಸಿಕ್ಕಿಲ್ಲ. ಕಂದಾಯ ಸಚಿವರ ಬಳಿ ನೆರೆ ಬಗ್ಗೆ ಮಾಹಿತಿಯೇ ಇಲ್ಲ. ಇಂತಹ ಪರಿಸ್ಥಿತಿ ನಾನು ಮುಖ್ಯಮಂತ್ರಿಯಾಗ ಆಗಿದ್ದರೆ ಎಲ್ಲೋಗಿದ್ದೀಯಾ ಕುಮಾರಸ್ವಾಮಿ ಎನ್ನೋವ್ರು ಎಂದು ಕಿಡಿಕಾರಿದರು.


ಪ್ರಧಾನಿ ಮೋದಿಯವರಿಗೆ ರಷ್ಯಾಕ್ಕೆ  ಹೋಗಿ 7 ಸಾವಿರ ಕೋಟಿ  ಹಣ ಪರಿಹಾರ ಕೊಡಲು ಆಗತ್ತೆ. ಆದ್ರೆ ನಮ್ಮ  ರಾಜ್ಯದ  ಸಮಸ್ಯೆಗಳ ಕಡೆ ಗಮನ ಕೊಡುವ ಕೆಲಸ ಮೋದಿಯಿಂದ ಆಗ್ತಿಲ್ಲ. ಮೋದಿ ಅವರಿಗೆ ರಾಜ್ಯದ ಜನರಿಗೆ ಹಣ ಕೊಡಲು ಸಮಯವಿಲ್ಲ. ನೆರೆಗೆ ಪರಿಹಾರ ನೀಡಿಲು ಹಣದ ಕೊರತೆ ಇಲ್ಲ. ಕೇಂದ್ರ ಸರ್ಕಾರದ ಹಣ ಕಾಯುವ ಅವಶ್ಯಕತೆ ಇಲ್ಲ ಎಂದರು.


ಟೆಲಿಪೋನ್ ಕದ್ದಾಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನನ್ನನ್ನ ಈ ವಿಚಾರದಲ್ಲಿ ಯಾರು ಮುಟ್ಟಲು ಆಗುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಪ್ರಶ್ನೆಯೇ ಇಲ್ಲ ಎಂದರು. 


ಸಿಂಎ ಯಡಿಯೂರಪ್ಪನವರಿಗೆ ಸಚಿವರನ್ನು ಹತೋಟಿಯಲ್ಲಿ ಇಡುವ ಸ್ವಾತಂತ್ರ ಇಲ್ಲ. ಅನರ್ಹ ಶಾಸಕರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com