ನೆರೆಯಂತಹ ರಾಷ್ಟ್ರೀಯ ವಿಪತ್ತಿಗೆ ಕೇಂದ್ರ ತಕ್ಷಣ ಪರಿಹಾರ ಘೋಷಿಸಬೇಕು: ರೈತ ಸಂಘಟನೆಗಳ ಒತ್ತಾಯ

ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪ್ಪತ್ತು ಎಂದು ಘೋಷಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿವೆ. 
ನೆರೆಯಂತಹ ರಾಷ್ಟ್ರೀಯ ವಿಪತ್ತಿಗೆ ಕೇಂದ್ರ ತಕ್ಷಣ ಪರಿಹಾರ ಘೋಷಿಸಬೇಕು: ರೈತ ಸಂಘಟನೆಗಳ ಒತ್ತಾಯ
ನೆರೆಯಂತಹ ರಾಷ್ಟ್ರೀಯ ವಿಪತ್ತಿಗೆ ಕೇಂದ್ರ ತಕ್ಷಣ ಪರಿಹಾರ ಘೋಷಿಸಬೇಕು: ರೈತ ಸಂಘಟನೆಗಳ ಒತ್ತಾಯ

ಬೆಂಗಳೂರು: ನೆರೆ ಸಂತ್ರಸ್ತರ ಪುನರ್ ವಸತಿ ಹಾಗೂ ಬೆಳೆಹಾನಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪ್ಪತ್ತು ಎಂದು ಘೋಷಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿವೆ. 

ರಾಜ್ಯದ ವಿವಿಧೆಡೆಯಿಂದ ಆಗಿಮಿಸಿದ್ದ ರೈತ ಪ್ರತಿನಿಧಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರುಸುವಂತೆ ಆಗ್ರಹಿಸಿದರು. ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ 8 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾದ ಕಬ್ಬು, ಹತ್ತಿ, ಮೆಕ್ಕೆಜೋಳ, ಬಾಳೆ, ಭತ್ತ ಮತ್ತಿತರ ಬೆಳೆಗಳು ನಾಶವಾಗಿವೆ. ಈ ಹಾನಿಗೆ ಕೃಷಿ ಇಲಾಖೆ ಮತ್ತು ಕೃಷಿ ಬೆಲೆ ಆಯೋಗ ಬೆಳೆಗಳ ಖರ್ಚಿನ ಉತ್ಪಾದನಾ ವೆಚ್ಚ ಅಂದಾಜು ಮಾಡಿರುವಂತೆ ಲಾಭ ಸೇರಿ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. 

ರಾಜ್ಯದಲ್ಲಿ ಎರಡೂವರೆ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬಿನ ಬೆಳೆ ನಾಶವಾಗಿದೆ. ಈ ಬೆಳೆಯ ನಷ್ಟಕ್ಕೆ ಕಬ್ಬು ಅಭಿವೃದ್ಧಿ ನಿರ್ದೇಶನಾಲಯ ಕೇಂದ್ರದ ಸಿಎಸಿಪಿಗೆ ಕಬ್ಬಿನ ಉತ್ಪಾದನಾ ವೆಚ್ಚದ ಅಂದಾಜು ಸಲ್ಲಿದೆ. ಆ ಪ್ರಕಾರ ಎಕರೆಗೆ 94 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಈ ಮಾನದಂಡವನ್ನು ಅನುಸರಿಸಿ ಬೆಳೆನಷ್ಟಕ್ಕೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.  ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ನೆರೆ ಸಂತ್ರಸ್ತರ ಕಷ್ಟವನ್ನು ಕೇಂದ್ರದ ಗಮನಕ್ಕೆ ತರಬೇಕು. ಈ ಸಂಬಂಧ ನಿಯೋಗದ ಮೂಲಕ ಪ್ರಧಾನಿ ಬಳಿ ತೆರಳಿ ಪರಿಹಾರಕ್ಕೆ ಮನವರಿಕೆ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು  ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com