ಚಾರ್ಮಾಡಿ ಘಾಟ್: ಲಘು ವಾಹನ ಸಂಚಾರಕ್ಕೆ ಮುಕ್ತ

ರಾಜ್ಯದ ಪ್ರಮುಖ ಹೆದ್ದಾರಿ ಮಾರ್ಗ ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿಸಲಾಗಿದೆ. ಘಾಟ್ ರಸ್ತೆ ಮಾರ್ಗದಲ್ಲಿ ಷರತ್ತಿನನ್ವಯ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಹೇಳಿದ್ದಾರೆ.
ಚಾರ್ಮಾಡಿ ಘಾಟ್
ಚಾರ್ಮಾಡಿ ಘಾಟ್

ಬೆಳ್ತಂಗಡಿ: ರಾಜ್ಯದ ಪ್ರಮುಖ ಹೆದ್ದಾರಿ ಮಾರ್ಗ ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿಸಲಾಗಿದೆ. ಘಾಟ್ ರಸ್ತೆ ಮಾರ್ಗದಲ್ಲಿ ಷರತ್ತಿನನ್ವಯ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು ಈ ಸಂಬಂಧ ಭಾನುವಾರ ಆದೇಶ ಜಾರಿಗೊಳಿಸಿದ್ದು ಮುಂದಿನ ಆದೇಶದವರೆಗೆ ಕೆಲ ನಿರ್ಬಂಧಗಳೊಡನೆ ವಾಹನ ಸಂಚಾರಕ್ಕೆ ಅವಕಾಶವಿದೆ.

ಮಾರ್ಗದಲ್ಲಿ ಕಾರು, ಜೀಪು, ಟೆಂಪೋ, ವ್ಯಾನ್, ಲಘು ಸರಕು ಸಾಗಾಟ ವಾಹನ (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು ಹಾಗೂ ಆಂಬ್ಯುಲೆನ್ಸ್ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿದೆ. ಇವುಗಳು ಬೆಳಗಿನ ಆರರಿಂದ ಸಂಜೆ ಆರು ಗಂಟೆಗಳವರೆಗೆ ಸಂಚಾರ ನಡೆಸಬಹುದಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಗಂಟೆಗೆ ೨೦ಕಿಮೀ ವೇಗದ ಮಿತಿಯಲ್ಲಿ ಸಂಚರಿಸಬೇಕು.ಅಲ್ಲದೆ ಮಾರ್ಗದ ನಡುವೆ ವಾಹನ ನಿಲ್ಲಿಸಿ ಫೋಟೋಗ್ರಫಿ ನಡೆಸುವುದು, ಸೆಲ್ಫಿ ತೆಗೆದುಕೊಳ್ಳುವುದು ನಿಷೇಧವೆಂದು ಆದೇಶದಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com