ಶಿವಮೊಗ್ಗ:ಗಾರ್ಡನ್ ಹೌಸ್ ನಲ್ಲಿ 500 ಬಗೆಯ ಗಿಡಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿರುವ ಪರಿಸರ ಪ್ರೇಮಿ

ಪರಿಸರ ಪ್ರೇಮಿ ಬಿ. ವೆಂಕಟಗಿರಿ ಎಂಬವರು ತಮ್ಮ ಮನೆಯಲ್ಲಿಯೇ ಉದ್ಯಾನವನ್ನು ನಿರ್ಮಿಸುವ ಮೂಲಕ 500 ಬಗೆಯ ಗಿಡ ಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿದ್ದಾರೆ.
ವೆಂಕಟಗಿರಿ
ವೆಂಕಟಗಿರಿ

ಶಿವಮೊಗ್ಗ: ಪರಿಸರ ಪ್ರೇಮಿ ಬಿ. ವೆಂಕಟಗಿರಿ ಎಂಬವರು ತಮ್ಮ ಮನೆಯಲ್ಲಿಯೇ ಉದ್ಯಾನವನ್ನು ನಿರ್ಮಿಸುವ ಮೂಲಕ 500 ಬಗೆಯ ಗಿಡ ಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿದ್ದಾರೆ.

 73 ವರ್ಷದ ವೆಂಕಟಗಿರಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು , ಗಿಡಮೂಲಿಕೆ ಸಸ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.ವೆಂಕಟಗಿರಿ 1500 ಬಗೆಯ ಬೀಜಗಳನ್ನು ಸಂಗ್ರಹಿಸಿದ್ದಾರೆ. ತನ್ನ ಸಾಧನೆಗಳನ್ನು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡ ಅವರು, ಯುವ ಜನರಲ್ಲಿ ಜ್ಞಾನವನ್ನು ಪಸರಿಸುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದಾಗಿ ಹೇಳುತ್ತಾರೆ.

ರಾಜ್ಯದಾದ್ಯಂತ ಸಂಚರಿಸಿ ಈ ತಳಿಯನ್ನು ಸಂಗ್ರಹಿಸಿದ್ದೇನೆ. ನವಗ್ರಹವನ, ನಂದನವನ, ನಕ್ಷತ್ರವನ, ಪವಿತ್ರ ವನ, ಅಶ್ವಿನಿ ವನ ಮತ್ತಿತರ ರೀತಿಯಲ್ಲಿ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಶಾಲಾ, ಕಾಲೇಜುಗಳಿಗೆ ತೆರಳಿ ಗಿಡಮೂಲಿಕೆ ಸಸ್ಯಗಳ ಬಗ್ಗೆ ಪ್ರದರ್ಶನ ಆಯೋಜಿಸುವ ಮೂಲಕ ಯುವ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com