ವೇತನಕ್ಕೆ ಕತ್ತರಿ ಹಾಕಿದ ಜೊಮ್ಯಾಟೋ: ಕಂಪನಿ ವಿರುದ್ಧ ತಿರುಗಿಬಿದ್ದ ಡೆಲಿವರಿ ಬಾಯ್ಸ್

ವೇತನ ಹಾಗೂ ಪ್ರೋತ್ಸಾಹ ಧನವನ್ನು ಕಡಿಮೆ ಮಾಡಿದ ಹಿನ್ನಲೆಯಲ್ಲಿ ಜೊಮ್ಯಾಟೋ ಕಂಪನಿ ವಿರುದ್ಧ ಡೆಲಿವರಿ ಬಾಯ್ಸ್ ಗಳು ತಿರುಗಿ ಬಿದ್ದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವೇತನ ಹಾಗೂ ಪ್ರೋತ್ಸಾಹ ಧನವನ್ನು ಕಡಿಮೆ ಮಾಡಿದ ಹಿನ್ನಲೆಯಲ್ಲಿ ಜೊಮ್ಯಾಟೋ ಕಂಪನಿ ವಿರುದ್ಧ ಡೆಲಿವರಿ ಬಾಯ್ಸ್ ಗಳು ತಿರುಗಿ ಬಿದ್ದಿದ್ದಾರೆ. 

ಜೊಮ್ಯಾಟೋ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 800 ಮಂದಿ ಡೆಲಿವರಿ ಬಾಯ್ಸ್ ಗಳು ಶನಿವಾರ ಕಂಪನಿಯ ವಿರುದ್ಧ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

ಎಲೆಕ್ಟ್ಟಾನಿಕ್ ಸಿಟಿಯಲ್ಲಿ 300 ಮಂದಿ ಡೆಲಿವರಿ ಬಾಯ್ಸ್ ಗಳು ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

ನಮಗೆ ಬರುತ್ತಿದ್ದ ಕಮಿಷನ್, ಪ್ರೋತ್ಸಾಹ ಧನ ಹಾಗೂ ಇನ್ನಿತರೆ ಲಾಭಗಳಿಗೆ ಕಂಪನಿ ಕತ್ತರಿ ಹಾಕಿದೆ ಎಂದು ಡೆಲಿವರಿ ಬಾಯ್ಸ್ ಗಳು ಆರೋಪಿಸಿದ್ದಾರೆ. 

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಕೆಲಸಕ್ಕೆ ಸೇರಿದ್ದೆ. ಈ ವೇಳೆ ಪ್ರತೀ ಡೆಲಿವರಿಯಲ್ಲಿ ಕನಿಷ್ಠ ರೂ.40 ಸಿಗುತ್ತಿತ್ತು. ಇದೀಗ ರೂ.15 ರಿಂದ 18 ಸಿಗುತ್ತಿದೆ ಎಂದು ಡೆಲಿವರಿ ಬಾಯ್ ಒಬ್ಬರು ಹೇಳಿದ್ದಾರೆ. 

ಪ್ರತೀನಿತ್ಯ ರೂ.600 ಸಂಪಾದಿಸಿದರೆ, ರೂ.200ನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿತ್ತು. ಇದೀಗ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಾರರು ಸೇರ್ಪಡೆಗೊಂಡಿರುವುದರಿಂದ ಗುರಿ ತಲುಪುವುದು ಕಷ್ಟವಾಗುತ್ತಿದೆ. ಇದನ್ನೇ ತಮ್ಮ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿರುವ ಕಂಪನಿ, ಕೆಲಸಗಾರರು ಹೆಚ್ಚಾಗಿರುವುದನ್ನೇ ನೆಪವಾಗಿಸಿಕೊಂಡು ನಮ್ಮ ವೇತನ, ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕುತ್ತಿದೆ ಎಂದು ಅನಂತಾ ಎಂಬುವವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com