ಬೆಂಗಳೂರು: ಹಣಕ್ಕಾಗಿ ಬೆದರಿಕೆ; ಟಿವಿ ನಿರೂಪಕಿ ಸೇರಿ ಹಲವು ಪತ್ರಕರ್ತರ ಬಂಧನ

68 ವರ್ಷದ ವ್ಯಕ್ತಿಯೊಬ್ಬರಿಗೆ ಹಣಕ್ಕಾಗಿ ಬೆದರಿಕೆ ಒಡ್ಡಿದ ಆರೋಪದಲ್ಲಿ ಟಿವಿ ನಿರೂಪಕಿ ಸೇರಿದಂತೆ ಒಟ್ಟು ಐವರನ್ನು  ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 68 ವರ್ಷದ ವ್ಯಕ್ತಿಯೊಬ್ಬರಿಗೆ ಹಣಕ್ಕಾಗಿ ಬೆದರಿಕೆ ಒಡ್ಡಿದ ಆರೋಪದಲ್ಲಿ ಟಿವಿ ನಿರೂಪಕಿ ಸೇರಿದಂತೆ ಒಟ್ಟು ಐವರನ್ನು  ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ರಂಜಿತಾ ಸಾಮಾಜಿಕ ಮಾಧ್ಯಮದ ಮೂಲಕ ಸಂತ್ರಸ್ತನನ್ನು ಭೇಟಿ ಮಾಡಿ ಹನಿ ಟ್ರಾಪ್ ಮೂಲಕ  ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು.  ಗೋವಿಂದರಾಜನಗರದ ಎನ್. ಸುರೇಶ್ ಮತ್ತು  ರಾಜಾಜಿನಗರದ ಚಂದ್ರಶೇಖರ್, ಅವರ ಸಹಚರರಾದ ವಿ. ಶ್ರೀನಿವಾಸ್, ಚಂದ್ರಶೇಖರ್, ವಿಕಾಸ್ ಮತ್ತು ಶಿವು ಬಂಧಿತ ಆರೋಪಿಗಳು. ಚಂದ್ರಶೇಖರ್ ಟಿವಿ ಚಾನೆಲ್ ಒಂದರ ರಿಪೋರ್ಟ್ ಆಗಿದ್ದಾನೆ.

ಹುಬ್ಬಳ್ಳಿ ಮೂಲದ 68 ವರ್ಷದ ವ್ಯಕ್ತಿಗೆ ರಂಜಿತಾ  ಮೆಸೇಜ್ ಮಾಡುತ್ತಿದ್ದಳು. ಅದಾದ ನಂತರ ಭೇಟಿ ಮಾಡುವಂತೆ ಕೇಳಿದ್ದಳು, ಅನಂತರ ಆ ವ್ಯಕ್ತಿಯ ಜೊತೆ ಎರಡು ದಿನಗಳ ಟ್ರಿಪ್ ಹೋಗಲು ನಿರ್ಧರಿಸಿದ್ದಳು.

ಆಗಸ್ಟ್ 25 ರಂದು ಬೆಂಗಳೂರಿನಿಂದ ಹೊರಟ ಇಬ್ಬರು ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ  ರೂಂ ಬುಕ್ ಮಾಡಿಸಿದ್ದರು, ಬುಕ್ ಮಾಡಿದ್ದ ಕೊಠಡಿಗೆ ಬಂದ ಕಿಡಿಗೇಡಿಗಳು ರಂಜಿತಾ ಜೊತೆ ಬೆಡ್ ಮೇಲೆ ಮಲಗುವಂತೆ ಒತ್ತಾಯಿಸಿದರು, ಬಲವಂತವಾಗಿ ಆಕೆಯ ಜೊತೆ ವ್ಯಕ್ತಿಯನ್ನು ಮಲಗಿಸಿ  ವಿಡಿಯೋ ಮಾಡಿದ್ದರು. 

ವಕ್ತಿಯ ಬಟ್ಟೆ ಬಿಚ್ಚಿಸಿ, ಆ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಗೋವಿಂದರಾಜ ನಗರದ ತನ್ನ ಕಚೇರಿಗೆ ಕರೆದುಕೊಂಡು ಸುರೇಶ್ ಹೋಗಿದ್ದನು. ಕಾರ್ಮಿಕರ ಸಂಘದ ಅಧ್ಯಕ್ಷನಾಗಿರುವ ಸುರೇಶ್ ಆ ವ್ಯಕ್ತಿಯನ್ನು ಕಿಡ್ನಾಪ್ ಮಾಡಲು ತನ್ನ ಕಾರನ್ನು ಬಳಸಿಕೊಂಡಿದ್ದನು.

ವ್ಯಕ್ತಿಯಿಂದ 15 ಸಾವಿರ ಕಿತ್ತುಕೊಂಡು 25 ಲಕ್ಷ  ರು ಹಣ ನೀಡುವಂತೆ, ಇಲ್ಲದಿದ್ದರೇ ಫೋಟೋ ಮತ್ತು ವಿಡಿಯೋವನ್ನು ಆತನ ಕುಟುಂಬಕ್ಕೆ ಮತ್ತು ನ್ಯೂಸ್ ಚಾನೆಲ್ಸ್ ಗಳಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದ,  ಹೀಗಾಗಿ ಆ ವ್ಯಕ್ತಿ ಹಣವನ್ನು ವರ್ಗಾವಣೆ ಮಾಡುವುದಾಗಿ ಹೇಳಿದ್ದರು,

ಅದಾದ ನಂತರ ನಿವೃತ್ತರಾಗಿದ್ದ ಆ ವ್ಯಕ್ತಿ ತಮ್ಮ ಸ್ನೇಹಿತನ ಜೊತೆ ಈ ವಿಷಯ  ಚರ್ಚಿಸಿ, ದೂರು ನೀಡಿದ್ದಾರೆ, ಸೆಪ್ಟಂಬರ್ 12 ರಂದು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾರು ಸೀಜ್ ಮಾಡಿದ್ದಾರೆ.

ರಂಜಿತಾ ತನ್ನ ಸಹೋದ್ಯೋಗಿಯಾಗಿದ್ದು, ಆಕೆ ಕೂಡ ಪತ್ರಕರ್ತೆಯಾಗಿದ್ದಾಳೆ, ಬೇಗನೆ ಹಣ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ಹೇಳಿಕೆ ನೀಡಿದ್ದಾನೆ. ಆತನ ಹೇಳಿಕೆ ಮೇರೆಗೆ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com